ಭಾರತದ ಕೊರೊನಾ ಡೇಂಜರ್ ಡೆತ್ ಸ್ಪಾಟ್ ಉಜ್ಜೈನಿ- 235ರಲ್ಲಿ 45 ಸೋಂಕಿತರು ಸಾವು!

ಉಜ್ಜೈನಿ (ಮಧ್ಯಪ್ರದೇಶ): ಕೋವಿಡ್ 19 ಅಥವಾ ಕೊರೋನಾ ಸೋಂಕಿನ ಭಾರತದ ಡೆಡ್ಲಿ ಡೇಂಜರ್ ಸ್ಪಾಟ್ ಕುಖ್ಯಾತಿಗೆ ಮಧ್ಯಪ್ರದೇಶದ ಉಜ್ಜೈನಿ ಪಾತ್ರವಾಗಿದೆ. ಕೊರೋನಾ ಸೋಂಕು ಬಾಧಿತರ ಸಂಖ್ಯೆ ಕಡಿಮೆ ಇದ್ದರೂ ಸೋಂಕಿನಿಂದ ಇಲ್ಲಿ ಸಾವನ್ನಪ್ಪುತ್ತಿರುವವರ ಮರಣ ಪ್ರಮಾಣ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಇಲ್ಲಿ ಸೋಂಕು ತಗುಲಿದ 100ರಲ್ಲಿ 19 ಜನ ಸಾವಿಗೀಡಾಗುತ್ತಿದ್ದಾರೆ. ಇದು ಇಲ್ಲಿನ ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಈ ಅಂಕಿ ಅಂಶ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಮೀರಿಸುತ್ತಿದೆ.

ಇದುವರೆಗೆ ಉಜ್ಜೈನಿಯಲ್ಲಿ 235 ಜನರಿಗೆ ಸೋಂಕು ತಗುಲಿದ್ದು ಇವರಲ್ಲಿ 45 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.3.34ರಷ್ಟಿದ್ದರೆ, ಉಜ್ಜೈನಿಯಲ್ಲಿ ಇದು ಶೇ.19.15ರಷ್ಟಿದೆ. ಕೋವಿಡ್ ರೋಗಿಗಳ ಸಂಖ್ಯೆ ಹಾಗೂ ಮರಣದಲ್ಲಿ ಮುಂಬೈ, ದೆಹಲಿ, ಅಹಮದಾಬಾದ್ ಅಗ್ರಸ್ಥಾನದಲ್ಲಿದ್ದರೂ ಅಲ್ಲಿನ ಮರಣ ಪ್ರಮಾಣ ಉಜ್ಜೈನಿಯಷ್ಟಿಲ್ಲ. ಮುಂಬೈ – ಶೇ.3.91, ದೆಹಲಿ-ಶೇ.1.08, ಅಹಮದಾಬಾದ್ ನಲ್ಲಿ ಶೇ. 6.29ರಷ್ಟಿದೆ. ರೋಗ ಪತ್ತೆ ಹಚ್ಚುವಲ್ಲಿ ಉಂಟಾಗುತ್ತಿರುವ ವಿಳಂಬ, ಚಿಕಿತ್ಸೆಗೆ ಮುಂದಾಗದೇ ಇರುವುದೇ ಮರಣ ಪ್ರಮಾಣ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ವಿಶ್ವದಲ್ಲಿ ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ.6.8ರಷ್ಟಿದೆ. ಯುಕೆಯಲ್ಲಿ ಶೇ.14, ಫ್ರಾನ್ಸ್ ನಲ್ಲಿ ಶೇ.14, ಇಟಲಿಯಲ್ಲಿ ಶೇ. 13, ಸ್ಪೇನ್ ನಲ್ಲಿ ಶೇ.10.11, ಯುಎಸ್‍ಎಯಲ್ಲಿ ಶೇ.5.95 ಹಾಗೂ ರಷ್ಯಾದಲ್ಲಿ ಶೇ. 0.90ರಷ್ಟಿದೆ.

ಕರ್ನಾಟಕದಲ್ಲಿ ಶೇ. 3.80: ಕೊರೋನಾ ಸೋಂಕಿತರ ಮರಣ ಪ್ರಮಾಣ ಶೇ.3.80 ರಷ್ಟಿದೆ. ಸೋಂಕು ಬಾಧಿತ 789 ಮಂದಿಯಲ್ಲಿ ಇದುವರೆಗೆ 30 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ 379 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಮಹಾರಾಷ್ಟ್ರ ಶೇ.3.80, ಮಧ್ಯಪ್ರದೇಶ ಶೇ. 5.90, ಗುಜರಾತ್ ಶೇ.6.06, ಪಶ್ಚಿಮ ಬಂಗಾಳ ಶೇ.9.75 ಹಾಗೂ ಕೇರಳದಲ್ಲಿ ಶೇ. 0.70 ಮರಣ ಪ್ರಮಾಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *