BBK 11: ಉಗ್ರಂ ಮಂಜು, ಮೋಕ್ಷಿತಾ ದಿಢೀರ್‌ ಬಂಧನ- ಟ್ವಿಸ್ಟ್‌ ಕೊಟ್ಟ ʻಬಿಗ್‌ ಬಾಸ್‌ʼ

ಬಿಗ್ ​ಬಾಸ್ (Bigg Boss Kannada 11) ಸಾಮ್ರಾಜ್ಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಮಹಾರಾಜ ಉಗ್ರಂ ಮಂಜು ಮತ್ತು ಯುವರಾಣಿ ಮೋಕ್ಷಿತಾ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಆಟವೇ ರದ್ದಾಗಿತ್ತು. ಇದೀಗ ಇವರಿಬ್ಬರ ಕಿತ್ತಾಟಕ್ಕೆ ಬಿಗ್​​ ಬಾಸ್ ಹೊಸ ಟ್ವಿಸ್ಟ್ ನೀಡಿದ್ದಾರೆ. ರಾಜ ಮತ್ತು ಯುವರಾಣಿ ಇಬ್ಬರನ್ನು ಬಂಧನದಲ್ಲಿ ಇರಿಸಿದ್ದಾರೆ. ಅದಷ್ಟೇ ಅಲ್ಲ, ಇಬ್ಬರಿಗೂ ಬಿಡುಗಡೆ ಭಾಗ್ಯ ಸಿಗಬೇಕಾದ್ರೆ, ಮನೆ ಮಂದಿ ಟಾಸ್ಕ್‌ ಗೆಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ವಾಹಿನಿ ಹಂಚಿಕೊಂಡ ಪ್ರೋಮೋ ಕುತೂಹಲ ಮೂಡಿಸಿದೆ.

ರಾಜಮನೆತನದ ಅಣ್ಣ-ತಂಗಿಯಾಗಿ ಮೆರದಾಡುತ್ತಿದ್ದ ಮಂಜಣ್ಣ (Ugramm Manju) ಹಾಗೂ ಮೋಕ್ಷಿತಾರನ್ನು (Mokshitha Pai) ಬಂಧಿಸಿ ಹಗ್ಗದಿಂದ ಕಟ್ಟಿ ಹಾಕಲಾಗಿದೆ. ಇದರಿಂದ ಬಿಗ್​ ಬಾಸ್ ಸಾಮ್ರಾಜ್ಯದಲ್ಲಿ ಪ್ರಜೆಗಳು ಮಾಡಿದ್ದೇ ಆಟವಾಗಿದೆ. ಅಲ್ಲದೇ ಬಿಗ್​ ಬಾಸ್​​ ರಾಜ, ಯುವರಾಣಿಯನ್ನು ಬಿಡಿಸಿಕೊಂಡು ಬರಲು ಅಲ್ಲಿನ ಪ್ರಜೆಗಳಿಗೆ ಟಾಸ್ಕ್ ನೀಡಿದ್ದಾರೆ.

ಯುವರಾಣಿ ಮೋಕ್ಷಿತಾ ಹಾಗೂ ಮಹಾರಾಜ ಮಂಜು ಬೆಂಬಲಿತ ಪ್ರಜೆಗಳು ಟಾಸ್ಕ್​ನಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಈ ವೇಳೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ, ನಿರ್ಧಾರಕ್ಕೆ ತ್ರಿವಿಕ್ರಮ್ ಹಾಗೂ ಭವ್ಯ ಗೌಡ ಕೆಂಡಕಾರಿದ್ದಾರೆ. ಆಟದ ವೇಳೆ, ತ್ರಿವಿಕ್ರಮ್‌ಗೆ ಫೌಲ್‌ ಕೊಟ್ಟಿದ್ದಕ್ಕೆ ಕಿತ್ತಾಟ ಶುರುವಾಗಿದೆ. ಬಂಧನಕ್ಕೆ ಒಳಗಾಗಿರುವ ಮಂಜು, ಮೋಕ್ಷಿತಾರನ್ನು ಪ್ರಜೆಗಳು ಹೇಗೆ ಬಿಡಿಸಿಕೊಂಡು ಬರುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.