BBK 11: ‘ಬಿಗ್‌ ಬಾಸ್‌’ನಿಂದ ಉಗ್ರಂ ಮಂಜು ಎಲಿಮಿನೇಟ್

‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ ರಂಗೇರಿದೆ. ಭವ್ಯಾ ಎಲಿಮಿನೇಷನ್‌ ಬಳಿಕ ಉಗ್ರಂ ಮಂಜು (Urgramm Manju) ಮನೆಯಿಂದ ಹೊರಬಂದಿದ್ದಾರೆ. ಮಂಜು ದೊಡ್ಮನೆಯ ಆಟಕ್ಕೆ ಬ್ರೇಕ್‌ ಬಿದ್ದಿದೆ.

ಗ್ರೇ ಏರಿಯಾ ಕಿಂಗ್‌, ಚಾಣಾಕ್ಷ ಎಂದೇ ಫೇಮಸ್‌ ಆಗಿದ್ದ ಮಂಜು ಅವರ ಬಿಗ್‌ ಬಾಸ್‌ ಆಟವು ಅಂತ್ಯವಾಗಿದೆ. 4ನೇ ರನ್ನರ್‌ ಅಪ್‌ ಆಗಿ ಮಂಜು ಹೊರಬಂದಿದ್ದಾರೆ. ಇದು ಫ್ಯಾನ್ಸ್‌ಗೆ ನಿರಾಸೆಯುಂಟು ಮಾಡಿದೆ.

200 ಸಿನಿಮಾಗಳಲ್ಲಿ ನಟಿಸಿರುವ ಮಂಜುಗೆ ಬಿಗ್‌ ಬಾಸ್‌ ಶೋ ಅವರ ಕೆರಿಯರ್‌ನಲ್ಲಿ ಹೊಸ ತಿರುವು ನೀಡಿದೆ. ಮಾಕ್ಸ್‌ ಸಿನಿಮಾದಲ್ಲಿ ಮಂಜು ನಟಿಸಿದ್ದರು. ಈ ಚಿತ್ರ ಕೂಡ ಸಕ್ಸಸ್‌ ಕಂಡಿದೆ. ಸುದೀಪ್‌ (Sudeep) ಮುಂದೆ ಮಂಜು ಅಬ್ಬರಿಸಿದ್ದರು.