ಬಿಎಸ್‍ವೈಗೆ ರೈತಪರ ಕೆಲಸ ಮಾಡುವ ಶಕ್ತಿಕೊಡು ಭಗವಂತ: ಶೋಭಾ ಕರಂದ್ಲಾಜೆ

ಉಡುಪಿ: 78ನೇ ವಸಂತಕ್ಕೆ ಕಾಲಿಟ್ಟ ಸಿಎಂ ಯಡಿಯೂರಪ್ಪ ಅವರಿಗೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಶುಭ ಕೋರಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸನ್ಮಾನ್ಯ ಸಿಎಂ ಯಡಿಯೂರಪ್ಪನವರಿಗೆ 77 ವರ್ಷ ತುಂಬಿದೆ. 77 ವರ್ಷ ವಯಸ್ಸಾದರು ಕೂಡ ರಾಜ್ಯದಲ್ಲಿ ನಿರಂತರ ಪ್ರವಾಸವನ್ನು ಮಾಡುತ್ತಿದ್ದಾರೆ. ಅತ್ಯಂತ ಹೆಚ್ಚು ಪ್ರವಾಸವನ್ನು ಮಾಡುತ್ತಿರುವಂತಹ ಒಬ್ಬ ಮುಖ್ಯಮಂತ್ರಿ ಅಂದರೆ ಅದು ಯಡಿಯೂರಪ್ಪನವರು ಎಂದು ಹೇಳಿದರು.

ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭವಾಗಲಿ. ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರ ಗಟ್ಟಿಯಾಗಿ, ಜನರ ಸಮಸ್ಯೆಗೆ ರಾಜ್ಯದ ರೈತರ ಸಮಸ್ಯೆಗೆ ಸ್ಪಂದಿಸುವಂತಹ ಒಂದು ಸರ್ಕಾರ ಆಗಲಿ. ಅವರಿಗೆ ಆ ಶಕ್ತಿ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *