ಗಾಳಕ್ಕೆ ಬಿದ್ದ ಅಪರೂಪದ ಶಾರ್ಕ್ ಜೊತೆ ಅರಬ್ಬೀ ಸಮುದ್ರದಲ್ಲಿ ಮೀನುಗಾರ ಸೆಣಸಾಟ

ಉಡುಪಿ: ಮುಂಗಾರು ಮಳೆಯ ಅಬ್ಬರ ಕಡಿಮೆಯಾದ ಕೂಡಲೇ ಅರಬ್ಬೀ ಸಮುದ್ರದಲ್ಲಿ ಹವ್ಯಾಸಿ ಮೀನುಗಾರಿಕೆ ಶುರುವಾಗಿದೆ. ಗಾಳ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿರುವ ಯುವಕರು ದೋಣಿಗಳ ಜೊತೆ ಅರಬ್ಬೀ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಗಾಳಕ್ಕೆ ಬಿದ್ದ ಅಪರೂಪರದ ಶಾರ್ಕ್ ಜೊತೆ ಮೀನುಗಾರರು ಅರಬ್ಬೀ ಸಮುದ್ರದಲ್ಲಿ ಮೀನುಗಾರ ಸೆಣಸಾಡಿಸಿದ್ದಾರೆ.

ಉಡುಪಿಯ ಪಡುಕೆರೆ ಕಡಲ ತೀರದಿಂದ ಸುಮಾರು 8-10 ಕಿಲೋಮೀಟರ್ ದೂರದಲ್ಲಿ ಗಾಳಹಾಕಿ ಮೀನುಗಾರಿಕೆ ಮಾಡುವ ಹವ್ಯಾಸಿ ಉದ್ಯಾವರ ನಾಗೇಶ್ ಕುಮಾರ್ ಅವರ ಗಾಳಕ್ಕೆ ಅಪರೂಪದ ಮೀನೊಂದು ಸಿಲುಕಿದೆ. ಭಾರೀ ಶಕ್ತಿಯುತ ಶಾರ್ಕ್ ಮೀನು ಗಾಳಕ್ಕೆ ಸಿಕ್ಕ ಹರಸಾಹಸ ಪಟ್ಟ ಘಟನೆ ನಡೆದಿದೆ.

ಕಳೆದ ಹಲವಾರು ವರ್ಷಗಳಿಂದ ಉದ್ಯಾವರ ನಾಗೇಶ್ ಗಾಲದ ಜೊತೆ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದಾರೆ. ಒಂದು ಬಾರಿಯೂ ಬರಿಗೈಯಲ್ಲಿ ನಾಗೇಶ್ ವಾಪಸ್ ಬಂದ ಉದಾಹರಣೆಯಿಲ್ಲ. ಈ ಬಾರಿ ಸಮುದ್ರಕ್ಕೆ ತೆರಳಿದ ನಾಗೇಶ್ ಗಾಳಕ್ಕೆ ಬಾರಿ ಅಪರೂಪದ ಶಾರ್ಕ್ ಮೀನು ಸಿಲುಕಿದೆ. ತುಳು ಭಾಷೆಯಲ್ಲಿ ಈ ಮೀನಿಗೆ ತಾಟೆ ಎಂದು ಕರೆಯುತ್ತಾರೆ. ಬಹಳ ಶಕ್ತಿಶಾಲಿಯಾಗಿರುವ ಈ ಮೀನು ನಾಗೇಶ್ ಕುಮಾರ್ ಅವರನ್ನು ಸತಾಯಿಸಿ ಸತಾಯಿಸಿ ದೋಣಿ ಕೈಸೇರಿದೆ.

ಉದ್ಯೋಗದಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ನಾಗೇಶ್ ಕುಮಾರ್ ಗಾಳ ಹಾಕಿ ಮೀನು ಹಿಡಿಯುವುದರಲ್ಲಿ ಬಹಳ ನಿಸ್ಸೀಮ. ಇಬ್ಬರು ಜೊತೆಯಾಗಿ ಆಗಾಗ ಸಮುದ್ರಕ್ಕೆ ಹೋಗುತ್ತೇವೆ. ಸಿಕ್ಕ ಮೀನನ್ನು ಹಂಚಿಕೊಳ್ಳುತ್ತೇವೆ. ಆದರೆ ಈ ಶಾರ್ಕ್ ಮೀನು ಗಾಳಕ್ಕೆ ಬಿದ್ದ ನಂತರ ಎತ್ತಿಗೆ ಹಾಕಲು ಬಹಳಷ್ಟು ಕಷ್ಟವಾಯಿತು. ಎಲ್ಲ ಮೀನುಗಳು ಗಾಳಕ್ಕೆ ಸಿಕ್ಕ ನಂತರ ಸಲೀಸಾಗಿ ಎಳೆಯಲು ಬರುತ್ತದೆ. ಆದರೆ ಇದು ಬಹಳ ಸತಾಯಿಸಿದ್ದು ಎಂದು ಮೊಗವೀರ ಯುವಕ ಯತೀಶ್ ತಿಂಗಳಾಯ ಮಾಹಿತಿ ನೀಡಿದರು. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

Comments

Leave a Reply

Your email address will not be published. Required fields are marked *