ರಾಮ ವಿಠಲ ದೇವರಿಗೆ ಪೇಜಾವರಶ್ರೀ ನೃತ್ಯ ಸೇವೆ

ಉಡುಪಿ: ರಾಮ ವಿಠಲ ದೇವರ ಸೇವೆ ಮಾಡುತ್ತಾ ಪೇಜಾವರ ಹಿರಿಯ ಶ್ರೀ ವಿಶ್ವೇಶತೀರ್ಥರು ಹರಿವಾಣ ನೃತ್ಯ ಸೇವೆ ಮಾಡಿದ್ದಾರೆ.

ತಮ್ಮ ಪಟ್ಟದ ದೇವರು ಶ್ರೀರಾಮ ವಿಠಲನ ಮುಂದೆ ಪೇಜಾವರ ಶ್ರೀಗಳು ನರ್ತನ ಸೇವೆ ಮಾಡಿದ್ದಾರೆ. ನಿರ್ಜಲೋಪವಾಸ ಮಾಡಿರುವ ಪೇಜಾವರ ಸ್ವಾಮೀಜಿ ತಟ್ಟೆಯನ್ನು ತಲೆಯ ಮೇಲೆ ಹರಿವಾಣ ಇಟ್ಟು ಸೇವೆ ಸಲ್ಲಿಸಿದ್ದಾರೆ. ದಿನಪೂರ್ತಿ ನೀರು ಕುಡಿಯದೆ ಉಪವಾಸವಿದ್ದ ಪೇಜಾವರಶ್ರೀ, ತನ್ನ 88ನೇ ವಯಸ್ಸಿನಲ್ಲಿ ಈ ಸೇವೆ ಮಾಡುತ್ತಿರುವುದು ವಿಶೇಷ.

ರಾತ್ರಿ ಪೂಜೆಯ ಬಳಿಕ ಮಹರಿವಾಣ ತಲೆಯಲ್ಲಿಟ್ಟು ದೇವರ ಪ್ರಸಾದವನ್ನು ಹರಿವಾಣದಲ್ಲಿರಿಸಿ ಪೂಜೆ ಮಾಡುವ ಸಂಪ್ರದಾಯವನ್ನು ಹಿರಿಯ ಪೇಜಾವರಶ್ರೀ ಪಾಲಿಸಿಕೊಂಡು ಬರುತ್ತಿದ್ದಾರೆ. ಚೆನ್ನೈನ ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ವಿಶೇಷ ಸೇವೆ ನೀಡಿದ್ದು, ಭಕ್ತರಲ್ಲಿ, ಮಠದ ವಟುಗಳಲ್ಲಿ ಬಹಳ ಆಶ್ಚರ್ಯ ಮೂಡಿಸಿದೆ.

https://www.youtube.com/watch?v=ndEgP9v-niA

Comments

Leave a Reply

Your email address will not be published. Required fields are marked *