ಕೋವಿಡ್ ಕಾಲಘಟ್ಟದಲ್ಲಿ ಸರಳ ಪರ್ಯಾಯ: ಕೃಷ್ಣಾಪುರ ವಿದ್ಯಾಸಾಗರ ತೀರ್ಥ ಸ್ವಾಮೀಜಿ

ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಅಷ್ಟಮಠಗಳ ಇತಿಹಾಸದಲ್ಲಿ 251ನೇ ಪರ್ಯಾಯ ಆಗಿರುತ್ತದೆ. ಕೋವಿಡ್ ಕಾಲಘಟ್ಟದಲ್ಲಿ ನಮ್ಮ ಪರ್ಯಾಯ ಬಂದಿರುವುದರಿಂದ ಅದೇ ಕಾರಣಕ್ಕಾಗಿ ಸರಳವಾಗಿ ನಡೆಯಲಿದೆ ಜನರೆಲ್ಲರೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿ ಎಂದು ಭಾವೀ ಪರ್ಯಾಯ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಧ್ವಾಚಾರ್ಯರು ಮತ್ತು ವಾದಿರಾಜಸ್ವಾಮಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಪರ್ಯಾಯ ನಡೆಸುತ್ತೇವೆ. ಎಲ್ಲರೂ ಶ್ರೀಕೃಷ್ಣ ಮುಖ್ಯಪ್ರಾಣರ ಅನುಗ್ರಹಕ್ಕೆ ಪಾತ್ರರಾಗಬೇಕು. ಒಬ್ಬ ವ್ಯಕ್ತಿಗಾಗಿ ಪರ್ಯಾಯ ಮಾಡುತ್ತಿಲ್ಲ. ದೇವರ ಪೂಜೆಗಾಗಿ ಪರ್ಯಾಯ ಮಹೋತ್ಸವವನ್ನು ಮಾಡುತ್ತಿದ್ದೇವೆ. ಎರಡು ವರ್ಷ ಲೋಕದ ಕಲ್ಯಾಣಕ್ಕಾಗಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಪೂಜೆಯನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಉಡುಪಿ ಪೇಟೆಯಲ್ಲಿ ಓಮಿಕ್ರಾನ್ ಓಡಾಟ – ಜನಜಾಗೃತಿ ಮೂಡಿಸಿದ ಪಬ್ಲಿಕ್ ಹೀರೋ

ಆರೋಗ್ಯ ಇಲಾಖೆ ಕೊಟ್ಟಂತಹ ಅಧಿಸೂಚನೆಗಳನ್ನು ಪಾಲಿಸಿ, ಭಾಗವಹಿಸಿ ಲೋಕಕ್ಕೆ ಕಲ್ಯಾಣ ಆಗುತ್ತದೆ. ಜನರೆಲ್ಲರೂ ಸರ್ಕಾರದ ನಿಯಮವನ್ನು ಪಾಲಿಸಿದರೆ ನಮ್ಮ ಮನಸ್ಸಿಗೂ ಸಂತೋಷವಾಗುತ್ತದೆ. ಲೋಕಕ್ಕೆ ಉಪಕಾರ ಮಾಡಿದಂತೆ ಆಗುತ್ತದೆ. ಹತ್ತು ಜನರ ಕಲ್ಯಾಣೋದ್ದೇಶದಿಂದ ನಾವು ಪರ್ಯಾಯದ ಪೀಠಕ್ಕೆ ಬರುತ್ತಿದ್ದೇವೆ. ನಮ್ಮಿಂದ ಇತರೆ ಹತ್ತು ಜನಕ್ಕೆ ಯಾವುದೇ ಸಮಸ್ಯೆಗಳು ಆಗಬಾರದು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕೋವಿಡ್ ಎಫೆಕ್ಟ್ ದಾಖಲೆ ಮಾರಾಟ – 358 ಕೋಟಿ ಡೋಲಾ ಟ್ಯಾಬ್ಲೆಟ್‍ಗಳು ಮಾರಾಟ

Comments

Leave a Reply

Your email address will not be published. Required fields are marked *