ಹಿಂದೂಗಳೇ ನಾಲ್ಕು ಮಕ್ಕಳನ್ನು ಹುಟ್ಟಿಸಿ: ಗೋವಿಂದ ಮಹಾರಾಜ್

ಉಡುಪಿ: ಹಿಂದೂಗಳು ನಾಲ್ಕು ಮಕ್ಕಳನ್ನು ಹುಟ್ಟಿಸಬೇಕು ಎಂದು ಉತ್ತರ ಸಂತ ಗೋವಿಂದ ಮಹಾರಾಜ್ ಹೇಳಿಕೆ ನೀಡಿದ್ದಾರೆ.

ಉಡುಪಿ ನಡೆಯುತ್ತಿರುವ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಹಲವು ಸಾಧು, ಸಂತರು ಆಗಮಿಸಿದ್ದು, ಈ ವೇಳೆ ಸಂಸದ್ ಕಾರ್ಯಕ್ರಮದಲ್ಲಿ ಮಾತನಾಡಿದ  ಗೋವಿಂದ ಮಹಾರಾಜ್,  ಮುಸ್ಲಿಮರಂತೆ ಹಿಂದೂಗಳು ಹೆಚ್ಚು ಮಕ್ಕಳನ್ನು ಹುಟ್ಟಿಸಬೇಕು. ಅಲ್ಲದೇ ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಜಾರಿಯಾಗುವ ಬೇಕು ಎಂದು ಆಗ್ರಹಿಸಿದ್ದಾರೆ.

12ನೇ ಧರ್ಮ ಸಂಸದ್ ಶುಕ್ರವಾರದಿಂದ ಉಡುಪಿಯಲ್ಲಿ ಆರಂಭಗೊಂಡಿದ್ದು, ಎರಡನೇ ದಿನವಾದ ಇಂದು ಸಂತ ಗೋವಿಂದ ಮಹಾರಾಜ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಈ ಕಾರ್ಯಕ್ರಮ ಭಾನುವಾರ ಮುಕ್ತಾಯವಾಗಲಿದೆ.

ಇದನ್ನೂ ಓದಿ: ದಲಿತರಿಗೆ ಬಾವಿ ಮುಟ್ಟಲು, ಹೆಣ ಸುಡಲು ಅವಕಾಶ ಮಾಡಿಕೊಡಿ: ತೊಗಾಡಿಯಾ

ಇದನ್ನು ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?


Comments

Leave a Reply

Your email address will not be published. Required fields are marked *