ಮಾಧ್ಯಮದವರನ್ನು ಇಟ್ಕೊಂಡು ಹೀಗೆಲ್ಲಾ ಮಾತಾಡಿದ್ರೆ ನನಗೆ ಕೋಪ ಬರುತ್ತೆ: ಜಯಮಾಲಾ

ಉಡುಪಿ: ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದ ವೇಳೆ ಮಾಧ್ಯಮದವರನ್ನು ಇಟ್ಕೊಂಡು ಹೀಗೆಲ್ಲಾ ಮಾತನಾಡಿದರೆ ನನಗೆ ಕೋಪ ಬರುತ್ತದೆ ಎಂದು ಉಡುಪಿಯ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದ್ದಾರೆ.

ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ `ಗಾಂಧಿ 150′ ಹೆಸರಿನ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭಾರತ್ ಬಂದ್ ವೇಳೆ ಪೊಲೀಸರಿಂದ ಲಾಠಿಚಾರ್ಚ್ ಗೆ ಒಳಗಾಗಿದ್ದ ಪಕ್ಷದ ಕಾರ್ಯಕರ್ತರ ನೋವನ್ನು ಕೇಳಿಲ್ಲ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿವೆ ಜಯಮಾಲಾಗೆ ಮುತ್ತಿಗೆ ಹಾಕಿದರು.

ಉಡುಪಿಯ ಎಸ್ಪಿಯನ್ನು ಎತ್ತಂಗಡಿ ಮಾಡಿಸಲು ಹಲವು ಬಾರಿ ಹೇಳಿದರೂ ಎತ್ತಂಗಡಿ ಮಾಡಿಸಿಲ್ಲ. ಆಸ್ಪತ್ರೆಗೆ ದಾಖಲಾದವರ ಆರೋಗ್ಯವನ್ನು ವಿಚಾರಿಸಿಲ್ಲ. ಆದರೆ ಗಣಪತಿ ಕೂರಿಸಿದ್ದ ಎಸ್ಪಿ ಮನೆಗೆ ನೀವು ಊಟಕ್ಕೆ ಹೋಗಿದ್ದು ಎಷ್ಟು ಸರಿ ಎಂದು ಎಂದು ಕಾಂಗ್ರೆಸ್ ಕಾರ್ಯಕತ್ರರು ಆಕ್ರೋಶಗೊಂಡು ಜಯಮಾಲಾ ಅವರನ್ನು ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಮುಂದೆ ನಿಂತು ಈ ರೀತಿಯ ಡ್ರಾಮಾ ಮಾಡಬೇಡಿ. ಈ ರೀತಿ ಹೇಳಿದ್ರೆ ನನಗೆ ಕೋಪ ಬರುತ್ತದೆ ಎಂದು ಜಯಾಮಾಲ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿ ಕಾಂಗ್ರೆಸ್ ಭವನದಿಂದ ಹೊರಬಂದು ಕಾರು ಹತ್ತಿ ಕಾಲ್ಕಿತ್ತರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *