ಉಡುಪಿ: ಮುಂಗಾರು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರಾವಳಿಯಲ್ಲಿ ಮಳೆ ಬರುವಂತಾಗಿದ್ದು, ಕಾರ್ಮೋಡ ಬಾನಲ್ಲಿ ಚಿತ್ತಾರ ಮೂಡಿಸಿದ್ದು ರಂಗಿನೋಕುಳಿ ಚೆಲ್ಲಿದೆ.
ಕೇರಳ ರಾಜ್ಯಕ್ಕೆ ಮುಂಗಾರು ಕಾಲಿಟ್ಟಿದ್ದು, ಕರ್ನಾಟಕ ಕರಾವಳಿ ಮೂಲಕ ನಮ್ಮ ರಾಜ್ಯದಲ್ಲಿ ಮಳೆಯಾಗಲು ಕ್ಷಣಗಣನೆ ಆರಂಭವಾಗಿದೆ. ಉಡುಪಿಯಲ್ಲಿ ಭಾನುವಾರ ಸಂಜೆಯ ಬಾನು ಎಲ್ಲರನ್ನೂ ಆಕರ್ಷಿಸಿದೆ. ನೆರಳು ಬೆಳಕಿನಾಟದ ಚಂದ ಜನರ ಮನ ತಣಿಸಿದೆ.

ಸಂಜೆ ಸೂರ್ಯ ಸಮುದ್ರಕ್ಕೆ ಇಳಿಯುತ್ತಿದ್ದಂತೆ ಬಾನಲ್ಲಿ ಹಳದಿ, ಕೆಂಪು, ನೀಲಿ, ಕಪ್ಪು, ಬಿಳಿ ಹೀಗೆ ನಾನಾ ಬಣ್ಣಗಳು ತುಂಬಿಕೊಂಡಿದೆ. ಛಾಯಾಗ್ರಾಹಕರಂತೂ ವಾರಾಂತ್ಯ ಆಗಸವನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿದ್ದು ಕ್ಯಾಮೆರಾದಲ್ಲಿ ಮೋಡದ ವಿವಿಧ ಆಕಾರವನ್ನು ಸೆರೆ ಮಾಡಿಕೊಂಡಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಕೆಲಕಾಲ ಧಾರಾಕಾರ ಮಳೆ ಸುರಿದಿದ್ದು ತಂಗಾಳಿ ಸಮುದ್ರದತ್ತ ಬೀಸಿ ವಾತಾಚರಣವನ್ನು ಕೂಲ್ ಮಾಡಿದೆ. ಇಂದು ರಾತ್ರಿ ಅಥವಾ ನಾಳೆ ಮುಂಗಾರಿನ ಮೊದಲ ಮಳೆ ಬೀಳುವ ಸಾಧ್ಯತೆಯಿದೆ.


Leave a Reply