ದೇವೇಂದ್ರ ಫಡ್ನವಿಸ್‍ರಿಂದ ಠಾಕ್ರೆ ಆಡಳಿತ ನಡೆಸೋದನ್ನ ಕಲಿಬೇಕು: ನವನೀತ್ ರಾಣಾ

ಮುಂಬೈ: ಉದ್ಧವ್ ಠಾಕ್ರೆ ಅವರು ದೇವೇಂದ್ರ ಫಡ್ನವಿಸ್ ಅವರಿಂದ ಆಡಳಿತ ನಡೆಸುವುದನ್ನು ಕಲಿಯಬೇಕು ಎಂದು ಅಮರಾವತಿ ಸಂಸದೆ ನವನೀತ್ ರಾಣಾ ಹೇಳಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ದಿನದ ಬಳಿಕ, ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಅಧಿಕಾರ ಪಡೆಯುವುದಕ್ಕೆ ಅವರ ತಂದೆ ಬಾಲ್ ಠಾಕ್ರೆ ಕಾರಣ. ಉದ್ಧವ್ ಠಾಕ್ರೆ ಅವರು ದೇವೇಂದ್ರ ಫಡ್ನವಿಸ್ ಅವರಿಂದ ಆಡಳಿತವನ್ನು ನಡೆಸುವುದನ್ನು ಕಲಿಯಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ : ದುಬಾರಿ ಚಿನ್ನದುಡೆಗೆಯಲ್ಲಿ ಗಮನ ಸೆಳೆದ ನಟಿ ಕಾರಾ ಡಿಲಿವಿಂಗೆ : ಬೆಲೆ ಗಾಬರಿ ಮೂಡಿಸುತ್ತೆ

ಉದ್ಧವ್ ಠಾಕ್ರೆ ಅವರ ಮನೆಯ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಕಳೆದ ತಿಂಗಳು ಪತಿ ಮತ್ತು ಶಾಸಕ ರವಿ ರಾಣಾ ಅವರೊಂದಿಗೆ ನವನೀತ್ ರಾಣಾ ಅವರನ್ನು ಬಂಧಿಸಲಾಗಿತ್ತು. ಈ ವೇಳೆ ಜೈಲಿನಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯ ವಿಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

ನಾನು ಇಂದು ದೆಹಲಿಗೆ ಹೋಗುತ್ತೇನೆ. ಲಾಕ್-ಅಪ್‍ನಿಂದ ಜೈಲಿನವರೆಗೆ ನನಗೆ ಏನು ಮಾಡಿದರು, ನನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಹೇಗೆ ನಿರ್ಲಕ್ಷ್ಯ ವಹಿಸಿದರು. ಮಹಾರಾಷ್ಟ್ರದಲ್ಲಿ ಜೈಲು ಶಿಕ್ಷೆಗೆ ಒಳಗಾದ ಮೊದಲ ಮಹಿಳಾ ಪ್ರತಿನಿಧಿ ನಾನಾಗಿದ್ದು, ನನಗೆ ಮತ್ತು ನನ್ನ ಪತಿಗೆ ಹೇಗೆ ಅನ್ಯಾಯವಾಯಿತು ಎಂಬ ಎಲ್ಲಾ ವಿವರಗಳನ್ನು ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ : ಮದ್ಯ ಕುಡಿಸಿ ರೇಪ್ – ರಾಜಸ್ಥಾನ ಸಚಿವರ ಪುತ್ರನ ವಿರುದ್ಧ FIR

ಇದೇ ವೇಳೆ, ಅಧಿಕಾರಕ್ಕಾಗಿ ಬಿಜೆಪಿಯವರ ಬೆನ್ನಿಗೆ ಚೂರಿ ಹಾಕುವ ಶಿವಸೇನೆ ಮುಖ್ಯಸ್ಥರು ಇತರರಿಗೆ ಉಪದೇಶ ನೀಡಬಾರದು ಎಂದರು. ನಂತರ ಮುಂಬರುವ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಿ ಶಿವಸೇನೆಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಉದ್ಧವ್ ಠಾಕ್ರೆ ಅವರಿಗೆ ಸವಾಲೊಡ್ಡಿದರು.

Comments

Leave a Reply

Your email address will not be published. Required fields are marked *