ಯು ಡಿಜಿಟಲ್ ನೆಟ್‌ವರ್ಕ್ 2ನೇ ವಾರ್ಷಿಕೋತ್ಸವ – ಅರುಣ್ ಬಡಿಗೇರ್‌ಗೆ ಸನ್ಮಾನ

ಮೈಸೂರು: ಯು ಡಿಜಿಟಲ್ ನೆಟ್ ವರ್ಕ್‍ನ ಎರಡನೇ ವರ್ಷದ ವಾರ್ಷಿಕೋತ್ಸವ ಇಂದು ಮೈಸೂರಿನ ಹೊರ ವಲಯದ ರೆಸಾರ್ಟ್‍ನಲ್ಲಿ ನಡೀತು.

ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್, ಹಿರಿಯ ಪತ್ರಕರ್ತರಾದ ರವಿ ಹೆಗಡೆ, ರವಿಕುಮಾರ್, ಶಾಸಕರಾದ ತನ್ವೀರ್‌ಸೇಠ್, ಎಲ್.ನಾಗೇಂದ್ರ, ಯು ಡಿಜಿಟಲ್ ಮುಖ್ಯಸ್ಥರಾದ ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಯು ಡಿಜಿಟಲ್ ನೆಟ್ ವರ್ಕ್ ಎರಡೇ ವರ್ಷದಲ್ಲಿ 12 ಜಿಲ್ಲೆಗಳಿಗೆ ವಿಸ್ತರಣೆಯಾಗಿದ್ದು, 3 ಲಕ್ಷಕ್ಕೂ ಅಧಿಕ ಸಂಪರ್ಕ ಬಾಕ್ಸ್ ಹೊಂದಿ ದೊಡ್ಡ ಸಾಧನೆಯತ್ತ ದಾಪುಗಾಲಿಟ್ಟಿದೆ. ನೆಟ್‍ವರ್ಕ್‍ನ ಸಾಧನೆಗೆ ಅನೇಕ ಗಣ್ಯರು ಮೆಚ್ಚುಗೆ ಸೂಚಿಸಿದ್ರು. ಇದನ್ನೂ ಓದಿ: ಗೂಗಲ್ ಮ್ಯಾಪ್‍ನಲ್ಲಿ ಕೆಜಿಎಫ್ ಮೂವೀ ಲೋಕೆಶನ್!

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಂಗನಾಥ್ ಅವರು, ಯು ಡಿಜಿಟಲ್ ಭವಿಷ್ಯದ ಸವಾಲಿನ ಬಗ್ಗೆ ಸಲಹೆ ನೀಡಿದ್ರು. ಇದೇ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ನಿರೂಪಕರಾದ ಅರುಣ್ ಬಡಿಗೇರ್ ಸೇರಿದಂತೆ ಇತರೆ ವಾಹಿನಿಯ ನಿರೂಪಕನ್ನು ಅಭಿನಂದಿಸಲಾಯಿತು. ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಯು ಡಿಜಿಟಲ್ ಓಟಿಟಿಗೆ ಚಾಲನೆ ನೀಡಿದರು.

Comments

Leave a Reply

Your email address will not be published. Required fields are marked *