ಒಬ್ಬ ಹುಡ್ಗಿಗಾಗಿ ಇಬ್ಬರ ಫೈಟ್ – ನಡುರಾತ್ರಿ ಲವ್‍ಗಾಗಿ ನಡೀತು ಮರ್ಡರ್

ಬೆಂಗಳೂರು: ಒಂದೇ ಹುಡುಗಿಯ ಮೇಲೆ ಇಬ್ಬರು ಹುಡುಗರು ಕಣ್ ಹಾಕಿದ್ರು. ಆ ಹುಡುಗಿಯನ್ನ ಮನವೊಲಿಸಿಕೊಳ್ಳೋ ಪೈಪೋಟಿಯಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳ ಬೆನ್ನುಬಿದ್ದ ಪೊಲೀಸರು, ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ನಡೆದಿದೆ.

ಕೆಜಿ ಹಳ್ಳಿ ನಿವಾಸಿ ಉಸ್ಮಾನ್ ಹಾಗೂ ಮೋಹಿನ್ ಇಬ್ಬರೂ ಅದೇ ಏರಿಯಾದ ಹುಡುಗಿಯನ್ನು ಇಷ್ಟಪಡುತ್ತಿದ್ದರಂತೆ. ಇಬ್ಬರ ನಡುವೆ ಇದೇ ವಿಚಾರಕ್ಕೆ ಕಿರಿಕ್ ನಡೀತಾನೇ ಇತ್ತು. ಇಬ್ಬರು ಸಿನಿಮಾ ಸ್ಟೈಲ್‍ನಲ್ಲಿ ಒಬ್ಬರಿಗೊಬ್ಬರು ವಾರ್ನ್ ಮಾಡ್ಕೋಳ್ತಿದ್ರು. ಆದರೆ ನಿನ್ನೆ ರಾತ್ರಿ ಆ ಜಗಳ ತಾರಕ್ಕೇರಿತ್ತು. ಉಸ್ಮಾನ್ ಒಬ್ಬಂಟಿಯಾಗಿ ಮೋಹಿನ್ ಗ್ಯಾಂಗ್ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಮೋಹಿನ್ ಅಂಡ್ ಗ್ಯಾಂಗ್ ಜಗಳ ತೆಗೆದು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಉಸ್ಮಾನ್‍ನನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ರು.  ಇದನ್ನೂ ಓದಿ: ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ- ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ದೂರು

ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪುಲಿಕೇಶಿನಗರ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಕೊಲೆ ಮಾಡಿದ್ದು ಯಾರು ಅನ್ನೋದನ್ನು ಪತ್ತೆ ಮಾಡಿದ್ರು. ತಕ್ಷಣ ಅಲರ್ಟ್ ಆಗಿ ಏರಿಯಾದಿಂದ ಹೊರ ಹೋಗುವ ಎಲ್ಲಾ ರಸ್ತೆಗಳನ್ನು ಬ್ಲಾಕ್ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ರು. ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಲ್ಲಿ ಬೈಯಪ್ಪನಹಳ್ಳಿ ರಸ್ತೆಯ ಕಲ್ಲಪಲ್ಲಿ ಸ್ಮಾಶಾನದ ಬಳಿ ಮೋಹಿನ್ ಮತ್ತು ಅದ್ನಾನ್ ಖಾನ್ ಬರ್ತಿದ್ದ ಬೈಕ್‍ನನ್ನು ಅಡ್ಡಗಟ್ಟಿ ಶರಣಾಗುವಂತೆ ಎಚ್ಚರಿಕೆ ನೀಡಿದ್ರು. ಆದರೆ ಪೊಲೀಸರ ಮಾತಿಗೆ ಕೇರ್ ಮಾಡದ ಆರೋಪಿಗಳು ತಮ್ಮ ಬಳಿಯಿಂದ ಮಾರಾಕಾಸ್ತ್ರಗಳಿಂದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ರು. ತಕ್ಷಣ ಅಲರ್ಟ್ ಆದ ಪೊಲೀಸರು ಇಬ್ಬರ ಕಾಲಿಗೂ ಫೈರ್ ಮಾಡಿ ವಶಕ್ಕೆ ಪಡೆದಿದ್ದಾರೆ.

ಸದ್ಯ ಕೊಲೆ ಕೇಸ್‍ನಲ್ಲಿ ಐವರು ಆರೋಪಿಗಳು ಅಂದರ್ ಆಗಿದ್ದಾರೆ. ಪ್ರೀತಿ, ಪ್ರೇಮ ಅಂತಾ ಹದಿಹರೆಯಲ್ಲಿ ಹುಡುಗಿಗೋಸ್ಕರ ಕೊಲೆ ಮಟ್ಟಕ್ಕೆ ಜಗಳ ಮಾಡ್ಕೊಂಡು ಜೈಲು ಮುದ್ದೆ ಮುರೀತಿದ್ದಾರೆ.

Comments

Leave a Reply

Your email address will not be published. Required fields are marked *