ಬಣ್ಣಬಣ್ಣದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯಕಿರಣ್ ಆಕಾಶದಲ್ಲಿ ಪತನ! – ವಿಮಾನದ ವಿಶೇಷತೆ ಏನು?

ಬೆಂಗಳೂರು: ನಗರದ ಯಲಹಂಕದಲ್ಲಿ ಏರ್ ಶೋಗೆ ತಯಾರಿ ನಡೆಸುತ್ತಿದ್ದ ವೇಳೆ ಸೂರ್ಯ ಕಿರಣ್ ವಿಮಾನಗಳೆರಡು ಡಿಕ್ಕಿಯಾಗಿ ನೆಲಕ್ಕೆ ಅಪ್ಪಳಿಸಿವೆ.

ಈ ಘಟನೆಯಲ್ಲಿ ಓರ್ವ ಪೈಲಟ್ ಮೃತಪಟ್ಟಿದ್ದಾರೆ. ಬುಧವಾರದಿಂದ 12ನೇ ಆವೃತ್ತಿಯ ಏರೋ ಇಂಡಿಯಾಗೆ ಚಾಲನೆ ಸಿಗಲಿದ್ದು, ಭಾನುವಾರದವರೆಗೆ ಈ ಶೋ ನಡೆಯಲಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ

ಸೂರ್ಯಕಿರಣ್ ವಿಶೇಷತೆ ಏನು?
ವೈಮಾನಿಕ ಪ್ರದರ್ಶನದ ವೇಳೆ ಆಗಸದಲ್ಲಿ ತ್ರಿವರ್ಣ ಚಿತ್ತಾರ ಬಿಡಿಸಿ ಬಾನಂಗಳದಲ್ಲಿ ದೇಶ ಭಕ್ತಿಯ ಕಿಚ್ಚು ಮೊಳಗಿಸುವ ವಿಮಾನವೇ ಸೂರ್ಯಕಿರಣ್. ವೈಮಾನಿಕ ಪ್ರದರ್ಶನದ ವೇಳೆ ಸೂರ್ಯಕಿರಣ ಇದ್ರೆ ಇನ್ನಷ್ಟು ಕೌತುಕ ಹೆಚ್ಚಾಗುತ್ತೆ. ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ಪ್ರತಿ ಏರ್ ಶೋನಲ್ಲೂ ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತಾ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸುತ್ತವೆ.

ಸುಮಾರು 30 ನಿಮಿಷ ಆಗಸದಲ್ಲಿ ಸೂರ್ಯ ಕಿರಣನ ಅಬ್ಬರ ಇರುತ್ತದೆ. ಸಾಮಾನ್ಯವಾಗಿ ಏರ್ ಶೋಗೂ ಮುನ್ನಾ ತಾಲೀಮು ನಡೆಸುವಾಗಲೂ ಜನ ಸೂರ್ಯ ಕಿರಣನನ್ನು ಕಣ್ತುಂಬಿಸಿಕೊಳ್ಳಲು ಆಕಾಶ ನೋಡಲು ಮುಗಿಬೀಳ್ತಾರೆ.

1996ರಿಂದ ಭಾರತೀಯ ವಾಯುಸೇನೆಯಲ್ಲಿ ಸಕ್ರೀಯವಾಗಿರುವ ಈ ಸೂರ್ಯಕಿರಣ್ ವಿಮಾನ ಪೈಲಟ್‍ಗಳಿಗೆ ತರಬೇತಿ ನೀಡಲು ಬಳಕೆ ಮಾಡಲಾಗುತ್ತದೆ. 5 ಟನ್ ತೂಕವಿರುವ ಸೂರ್ಯಕಿರಣ್ ಜೆಟ್ ವಾಯುಸೇನೆಯ 52 ನೇ ಸ್ಕ್ವಾಡರ್ನ್ ಆಗಿ ಸೇರ್ಪಡೆಯಾಗಿತ್ತು. ಗಂಟೆಗೆ 780 ಕಿಮಿ ವೇಗದ ಹಾರಾಟದಲ್ಲಿ ಸಾಮರ್ಥ್ಯ ಹೊಂದಿರುವ ಸೂರ್ಯಕಿರಣ್ 2006ರ ಮಾರ್ಚ್ 18 ರಂದು ಬೀದರ್ ವಾಯುನೆಲೆಯಲ್ಲಿ ಪತನ ಹೊಂದಿತ್ತು. ಈ ಘಟನೆಯಲ್ಲಿ ಇಬ್ಬರು ಪೈಲಟ್‍ಗಳು ಗಂಭೀರವಾಗಿ ಗಾಯಗೊಂಡಿದ್ದರು.

https://www.youtube.com/watch?v=S8anwX84c_8

https://www.youtube.com/watch?v=OOoChcGXCvI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *