ಕಲಬುರಗಿ: ನಗರದ ಗೋವಾ ಹೋಟೆಲ್ ಬಳಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಪುಡಿ ರೌಡಿಗಳು ಯಾರ ಭಯವಿಲ್ಲದೇ ನಡು ರಸ್ತೆಯಲ್ಲಿ ಲಾಂಗ್, ಮಚ್ಚುಗಳಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಏನಿದು ಘಟನೆ?: ಮೇ 23ರಂದು ನಗರದ ಗೋವಾ ಹೋಟೆಲ್ ಬಳಿ ಸೆವನ್ ಸ್ಟಾರ್ ಪ್ರದೀಪ ಗ್ಯಾಂಗ್‍ನವರು ಎದುರಾಳಿ ಫಯೀಮ್ ಗ್ಯಾಂಗ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯಲ್ಲಿ ರೌಡಿ ಫಯೀಮ್, ನಿತಿನ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ರೌಡಿಗಳು ಒಬ್ಬರ ಮೇಲೊಬ್ಬರು ಹಲ್ಲೆ ಮಾಡುವುದನ್ನ ಕಂಡ ಸ್ಥಳೀಯರು ಭಯಭೀತರಾಗಿ ಅಂಗಡಿಗಳನ್ನು ಮುಚ್ಚಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಕಲಬುರಗಿ ಎಸ್‍ಪಿ ಎನ್. ಶಶಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ಈ ಎರಡು ಗ್ಯಾಂಗ್‍ಗಳ ನಡುವೆ ಪದೇ ಪದೇ ಜನವಸತಿ ಪ್ರದೇಶದಲ್ಲಿ ಗಲಾಟೆ ನಡೆಯುತ್ತಿದ್ದು, ಸ್ಥಳೀಯರ ನಿದ್ದೆಗೆಡಿಸಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಡಿಯೋ: ಹಾಡಹಗಲೇ ವ್ಯಕ್ತಿಯನ್ನ ಅಟ್ಟಾಡಿಸಿ ಕುರಿ ಕಡಿಯುವಂತೆ ಕೊಚ್ಚಿ ಕೊಚ್ಚಿ ಕೊಂದ್ರು
https://www.youtube.com/watch?v=o0057li_BTo

Leave a Reply