ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣ ಗ್ರಾಮದಲ್ಲಿ ಯುಗಾದಿ ಹಬ್ಬದ ಕರಿ ಹಿನ್ನೆಲೆ ಬಣ್ಣ ಎರಚಾಟದ ವೇಳೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಕಲ್ಲು ತೂರಾಟ ನಡೆದು, ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಯುಗಾದಿ ಹಬ್ಬದ ಪ್ರಯುಕ್ತ ಡಿಜೆ ಸೌಂಡ್ ಹಾಕಿಕೊಂಡು ಮೆರವಣಿಗೆ ಮಾಡುವ ವೇಳೆ ಗಲಾಟೆ ಪ್ರಾರಂಭವಾಗಿದೆ. ಮಸೀದಿ ಮುಂದೆ ಡಿಜೆ ಹಾಕಿ ಕುಣಿದಿದ್ದಕ್ಕೆ ಗಲಾಟೆ ನಡೆದಿದೆ. ಎರಡು ಕಡೆಯವರು ಕಲ್ಲು ತೂರಾಟ ನಡೆಸಿ ಹೊಡೆದಾಡಿಕೊಂಡಿದ್ದಾರೆ.

ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಗಲಾಟೆ ಮಾಹಿತಿ ತಿಳಿದು ಕೂಡಲೇ ಪೊಲೀಸರು ಗ್ರಾಮಕ್ಕೆ ಬಂದಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಡಿಆರ್ ತುಕಡಿ ಪೊಲೀಸ್ ವ್ಯಾನ್ ಸೇರಿದಂತೆ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವು
ಯುಗಾದಿ ಹಬ್ಬದ ಕರಿ ಹಿನ್ನೆಲೆ ಜಿಲ್ಲೆಯಲ್ಲಿ ಓಕಳಿಯಾಟ ಜೋರಾಗಿ ನಡೆದಿದೆ. ಮಸ್ಕಿ, ಸಿಂಧನೂರು, ಲಿಂಗಸುಗೂರು ಸೇರಿ ಜಿಲ್ಲೆಯ ಹಲವೆಡೆ ಬಣ್ಣದ ಹಬ್ಬ ಆಚರಣೆ ಮಾಡಲಾಗುತ್ತಿದೆ. ಹೋಳಿ ಹಾಗೂ ಯುಗಾದಿ ಎರಡು ಸಂದರ್ಭದಲ್ಲೂ ಜಿಲ್ಲೆಯಲ್ಲಿ ರಂಗೀನಾಟ ನಡೆಯುತ್ತದೆ. ವಯಸ್ಸಿನ ಭೇದವಿಲ್ಲದೆ ರಂಗು ಎರಚಿ ಜನ ಸಂಭ್ರಮಿಸುತ್ತಾರೆ. ಬೇವು, ಬೆಲ್ಲ ಸವಿದ ಬಳಿಕ ಬಣ್ಣದ ಹಬ್ಬದ ಆಚರಣೆ ನಡೆಯುತ್ತದೆ. ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

Leave a Reply