ಯುವತಿಯರ ನಡುವೆ ಮದ್ವೆ, ಎಸ್ಕೇಪ್: ಬೆಂಗಳೂರಿನಲ್ಲೊಂದು ವಿಚಿತ್ರ ಕೇಸ್

ಬೆಂಗಳೂರು: ಇಬ್ಬರು ಯುವತಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿ ಈಗ ನಾಪತ್ತೆಯಾಗಿರುವ ಘಟನೆ ವಿವೇಕನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನಗರದ ಮಾಲಿನಿ ಮತ್ತು ವೆರೋನಿಕಾ ಪ್ರೀತಿಸಿ ಮದುವೆಯಾಗಿ ಮೂರನೇ ಬಾರಿ ಓಡಿ ಹೋಗಿದ್ದು, ಪೋಷಕರು ದುಃಖದಲ್ಲಿದ್ದಾರೆ.

ಏನಿದು ಘಟನೆ?
ಮಾಲಿನಿ ಮತ್ತು ವೆರೋನಿಕಾ ಕಾಲೇಜಿನಲ್ಲಿ ಓದುತ್ತಿದ್ದಾಗ 2016 ಜೂನ್‍ನಲ್ಲಿ ತಾಮಿಳುನಾಡಿನ ವೆಲ್ಲಂಕಣಿಗೆ ಓಡಿ ಹೋಗಿದ್ದರು. ಒಂದು ವಾರದ ಬಳಿಕ ಮನೆಯವವರ ಒತ್ತಡದ ಮೇಲೆ ಮನೆಗೆ ಬಂದಿದ್ದ ಇವರು ಕಳೆದ ವರ್ಷದ ನವೆಂಬರ್‍ನಲ್ಲಿ ಮತ್ತೆ ಮಧುರೈಗೆ ಓಡಿಹೋಗಿದ್ದರು. ಇಲ್ಲಿ ಇವರಿಗೆ ಮಂಗಳಮುಖಿಯರ ಸಂಪರ್ಕವಾಗಿದೆ. ಈ ವಿಚಾರ ತಿಳಿದು ಹೇಗೂ ಇವರನ್ನು ಪೋಷಕರು ಮನ ಒಲಿಸಿ ಮನೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು.

ಮನೆಗೆ ಬಂದ ಬಳಿಕ ಇವರಿಬ್ಬರು ಚೆನ್ನಾಗಿದ್ದರು. ಆದರೆ ಶುಕ್ರವಾರ ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿದ ಇಬ್ಬರು ಈಗ ಮನೆಗೆ ಬಾರದೇ ಮೂರನೇ ಬಾರಿ ಓಡಿ ಹೋಗಿದ್ದಾರೆ.

ಈಗ ಇವರಿಬ್ಬರು ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಪೋಷಕರು ಇದೂವರೆಗೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.

Comments

Leave a Reply

Your email address will not be published. Required fields are marked *