ಒಬ್ಬಳಿಗಾಗಿ ಇಬ್ಬರು ಯುವಕರ ಮಧ್ಯೆ ಮಾರಾಮಾರಿ: ಓರ್ವನ ಸ್ಥಿತಿ ಚಿಂತಾಜನಕ

ಬೆಂಗಳೂರು: ಹುಡುಗಿಗಾಗಿ ಇಬ್ಬರು ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆಯೊಂದು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಶ್ ಮತ್ತು ರಾಜೇಂದ್ರ ಎಂಬುವರ ನಡುವೆ ಈ ಮಾರಾಮಾರಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ರಾಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಏನಿದು ಘಟನೆ?: ಕವನ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಯಶ್ ಹಾಗೂ ದಿವಾಕರ್ ಇಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಯಶ್ ಹಾಗೂ ದಿವಾಕರ್ ನಡುವೆ ಗಲಾಟೆ ನಡೆದಿದೆ. ಹೀಗಾಗಿ ದಿವಾಕರ್ ಪರವಾಗಿ ಸ್ನೇಹಿತ ರಾಜೇಂದ್ರ ಎಂಬಾತ ರಾಜಿ ಪಂಚಾಯ್ತಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲು ಯಶ್ ಹಾಗೂ ಆತನ ಸ್ನೇಹಿತರು ಮುಂದಾಗಿದ್ದಾರೆ.

ಸದ್ಯ ದಿವಾಕರ್ ಸ್ನೇಹಿತ ರಾಜೇಂದ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಹಲ್ಲೆಯ ಬಳಿಕ ಯಶ್ ಹಾಗೂ ಆತನ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *