ಅಪಘಾತದಲ್ಲಿ ಮಹಿಳೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್-ಪತಿಯಿಂದಲೇ ಕೊಲೆ ಯತ್ನ?

ರಾಯಚೂರು: ರಸ್ತೆಗಳೆಲ್ಲಾ ಹಾಳಾಗಿ ಬರೀ ತಗ್ಗು ಗುಂಡಿಗಳು ತುಂಬಿರುವ ರಾಯಚೂರಿನಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತವೊಂದು ಇಡೀ ನಗರವನ್ನು ತಲ್ಲಣಗೊಳಿಸಿತ್ತು. ಆದರೆ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮೃತ ಮಹಿಳೆಯ ಪತಿಯೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಅಕ್ಟೋಬರ್ 9 ರಂದು ಸ್ಕೂಟಿಯಲ್ಲಿ ಹೊರಟಿದ್ದ 35 ವರ್ಷದ ತಾಯಮ್ಮ ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಗಳು ಘಟನೆಗೆ ಹೊಸ ಆಯಾಮ ನೀಡಿವೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ಅಂತ ದಾಖಲಾಗಿದ್ದ ಕೇಸ್ ಈಗ ಕೊಲೆ ಅನ್ನೋ ಅನುಮಾನಗಳನ್ನು ಮೂಡಿಸಿದೆ.

ಮೃತಳ ಪೋಷಕರು ಸ್ಕೂಟಿ ನಡೆಸುತ್ತಿದ್ದ ಆಕೆಯ ಪತಿ ಗುರುಬಸವನ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸದಾ ವರದಕ್ಷಿಣೆ ಕಿರುಕುಳ ನೀಡುತ್ತ ಈ ಮೊದಲು ಹಲವು ಬಾರಿ ಕೊಲೆ ಪ್ರಯತ್ನ ಮಾಡಿದ್ದ, ಪತಿ ಗುರುಬಸವನೇ ತಮ್ಮ ಮಗಳನ್ನು ಲಾರಿಯ ಚಕ್ರಕ್ಕೆ ತಳ್ಳಿದ್ದಾನೆ ಅಂತ ದೂರು ನೀಡಿದ್ದಾರೆ. ಸಾಮಾನ್ಯ ವೇಗದಲ್ಲಿ ಹೋಗುತ್ತಿದ್ದ ಸ್ಕೂಟಿ ಏಕಾಏಕಿ ಬಿದ್ದು ಮಹಿಳೆ ಲಾರಿ ಚಕ್ರದ ಅಡಿ ಸಿಲುಕಿ ಸಾವನ್ನಪ್ಪಿರುವ ದೃಶ್ಯ ಶಾಪಿಂಗ್ ಮಾಲ್‍ವೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

 

 

Comments

Leave a Reply

Your email address will not be published. Required fields are marked *