99,900 ರೂಪಾಯಿಗೆ TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್, ಇಂದು ‘ಟಿವಿಎಸ್ ಆರ್ಬಿಟರ್’ (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆಲೆ ರೂ 99,900 (ಎಕ್ಸ್-ಶೋರೂಮ್, ಬೆಂಗಳೂರು; PM ಇ-ಡ್ರೈವ್ ಸ್ಕೀಮ್ ಸೇರಿದಂತೆ).

ಆರ್ಬಿಟರ್ 3.1kWh ಬ್ಯಾಟರಿ ಪ್ಯಾಕ್‌ನೊಂದಿಗೆ ಮಾತ್ರ ಲಭ್ಯವಿದ್ದು, ಒಮ್ಮೆ ಚಾರ್ಜ್ ಮಾಡಿದರೆ 158km ಚಲಿಸುತ್ತದೆ ಎಂದು ಕಂಪನಿ ಹೇಳಿದೆ. ಆದರೆ ನಿಜವಾದ ರೇಂಜ್ ಸುಮಾರು 120 ಕಿಮೀ ನೀಡಬಹುದು. ಸ್ಕೂಟರ್‌ನ ಗರಿಷ್ಠ ವೇಗವನ್ನು ಗಂಟೆಗೆ 68 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.

ಟಿವಿಎಸ್ ಆರ್ಬಿಟರ್‌ಗೆ ಓಲಾ S1Z ಮತ್ತು ರಿವರ್ ಇಂಡೀ ಸ್ಕೂಟರ್‌ಗಳಲ್ಲಿ ನೀಡಿರುವಂತೆ 14-ಇಂಚಿನ ಮುಂಭಾಗದ ಚಕ್ರ ನೀಡಲಾಗಿದೆ. ಹಿಂಭಾಗದ ಚಕ್ರ 12 ಇಂಚಿದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಓವರ್-ದಿ-ಏರ್ ಅಪ್‌ಡೇಟ್‌ಗಳು, ಆಂಟಿ-ಥೆಫ್ಟ್, ಕ್ರ್ಯಾಶ್ ಮತ್ತು ಜಿಯೋ-ಫೆನ್ಸಿಂಗ್ ಒಳಗೊಂಡ ಸುರಕ್ಷತಾ ಎಚ್ಚರಿಕೆಗಳನ್ನು ಕನೆಕ್ಟೆಡ್ ಆಪ್ ಮೂಲಕ ಪಡೆಯಬಹುದಾಗಿದೆ. ಈಕೋ ಮತ್ತು ಪವರ್ ಮೋಡ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್ (ರಿವರ್ಸ್ ಫಂಕ್ಷನ್) ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಈ ಸ್ಕೂಟರ್‌ ಹೊಂದಿದೆ.

ಆರ್ಬಿಟರ್‌ನಲ್ಲಿ ಹ್ಯಾಂಡಲ್‌ಬಾರ್-ಮೌಂಟೆಡ್ LED ಹೆಡ್‌ಲ್ಯಾಂಪ್, LED ಲೈಟ್ ಸ್ಟ್ರಿಪ್‌, ಎರಡು ಹೆಲ್ಮೆಟ್‌ಗಳನ್ನು ಇಡಬಹುದಾದ 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ವಿಶಾಲವಾದ 290 ಎಂಎಂ ಫ್ಲಾಟ್ ಫ್ಲೋರ್‌ಬೋರ್ಡ್, ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆರ್ಬಿಟರ್ ನಿಯಾನ್ ಸನ್ ಬರ್ಸ್ಟ್, ಸ್ಟ್ರಾಟೋಸ್ ಬ್ಲೂ, ಲೂನಾರ್ ಗ್ರೇ, ಮಾರ್ಟಿಯನ್ ಕಾಪರ್, ಕಾಸ್ಮಿಕ್ ಟೈಟಾನಿಯಂ ಮತ್ತು ಸ್ಟೆಲ್ಲಾರ್ ಸಿಲ್ವರ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ.