ರಸ್ತೆ ಅಪಘಾತದಲ್ಲಿ ಕಿರುತೆರೆಯ ನಟರಿಬ್ಬರು ಸೇರಿ ಮೂವರ ದುರ್ಮರಣ!

ಮುಂಬೈ: ಇಬ್ಬರು ಧಾರವಾಹಿ ನಟರು ಸೇರಿ ಮೂವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಬೈ ಸಮೀಪದ ಪಾಲ್ ಗರ್ ತಾಲೂಕಿನ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ನಡೆದಿದೆ.

ಗಗನ್ ಕಂಗ್(38) ಮತ್ತು ಅರ್ಜಿತ್ ಲವಾನಿಯ(30) ಮೃತಪಟ್ಟ ದುರ್ದೈವಿಗಳು. ಈ ಇಬ್ಬರೂ ಕಿರುತೆರೆಯ ನಟರು ಹಿಂದಿಯ ಭಕ್ತಿ ಪ್ರಧಾನವಾದ ಧಾರವಾಹಿಯೊಂದರಲ್ಲಿ ನಟಿಸುತ್ತಿದ್ದರು. ಅಪಘಾತದಲ್ಲಿ ಸಾವನ್ನಪ್ಪಿದ ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಮನೋರ್ ಪೊಲೀಸ್ ಠಾಣೆಯ ಅಧಿಕಾರಿ ಮಹೇಶ್ ಪಾಟೀಲ್ ಹೇಳಿದ್ದಾರೆ.

ಚಿತ್ರೀಕರಣ ಮುಗಿಸಿ ಮುಂಬೈನಿಂದ ಅಹಮದಾದ್‍ಗೆ ಹಿಂದಿರುಗುವಾಗ ಕಾರ್ ನಿಯಂತ್ರಣ ತಪ್ಪಿ ಚಿಲ್ಲರ್ ಫಾಟ್ ಹತ್ತಿರದ ಸ್ಟೇಷ್‍ನರಿ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮುಂಬೈನ ಗುರ್‍ಗಾಂವ್‍ನಲ್ಲಿ ವಾಸಿಸುತ್ತಿದ್ದ ಗಗನ್ ಕಂಗ್ ಕಾರ್‍ನ್ನು ಚಲಾಯಿಸುತ್ತಿದ್ದರು. ಕಲರ್ಸ್‍ನಲ್ಲಿ ಪ್ರಸಾರವಾಗುವ `ಮಹಾಕಾಳಿ ಅಂತ್ ಕೀ ಆರಂಭ್ ಹೇ’ ಧಾರಾವಾಹಿಯಲ್ಲಿ ಗಗನ್ ಮತ್ತು ಅರ್ಜಿತ್ ನಟಿಸುತ್ತಿದ್ದರು.

https://twitter.com/GURUGGANG/status/898940228462706689

https://www.instagram.com/p/BYAIPlGjss0/?taken-by=guruggang

https://www.instagram.com/p/BYAQcriHz-_/?tagged=gagankang

https://www.instagram.com/p/BX_rFUDD1mz/?tagged=gagankang

https://www.instagram.com/p/BX-8bhUAJvr/?tagged=gagankang

https://www.instagram.com/p/BTg9eZlh3SD/?tagged=gagankang

https://www.instagram.com/p/BX-6eoJhEal/?tagged=gagankang

Comments

Leave a Reply

Your email address will not be published. Required fields are marked *