ಕಿರುತೆರೆ ನಟಿ ರಶ್ಮಿ ರೇಖಾ ಓಜಾ ಆತ್ಮಹತ್ಯೆ.!

ಇತ್ತೀಚೆಗೆ ಟಿವಿ ಲೋಕದಲ್ಲಿ ಒಂದಾದ ಮೇಲೆ ಒಂದು ಶಾಕ್ ಎದುರಾಗುತ್ತಲೇ ಇದೆ. ಸಾಕಷ್ಟು ಕಿರುತೆರೆ ನಟಿ ಮತ್ತು ಮಾಡೆಲ್ ಅನುಮಾನಾಸ್ಪದ ಸಾವಾಗುತ್ತಿದೆ. ಈಗ ಒಡಿಶಾದ ಖ್ಯಾತ ಕಿರುತೆರೆ ನಟಿ 23ರ ರಶ್ಮಿ ರೇಖಾ ಓಜಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಅಂತಾ ನಟಿಯ ಪೋಷಕರು ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಡಿಶಾದ ಸಾಕಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ನಟಿ ರಶ್ಮಿರೇಖಾಗೆ ಅಪಾರ ಅಭಿಮಾನಿಗಳ ಬಳಗವಿದೆ. ರಶ್ಮಿಯ ಅಕಾಲಿಕ ಸಾವು ಪೋಷಕರಿಗೆ, ಸ್ನೇಹಿತರಿಗೆ ಶಾಕ್ ನೀಡಿದೆ. ಭುವನೇಶ್ವರದ ನಯಪಿಳ್ಳಿ ಭಾಗದಲ್ಲಿ ರಶ್ಮಿ ರೇಖಾ ಓಜಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಅಸಹಜ ಸಾವು ಅಂತಾ ಪೊಲೀಸರು ಕೇಸ್ ದಾಖಾಲಿಸಿಕೊಂಡಿದ್ದಾರೆ. ಮುಂಚೆ ಆತ್ಮಹತ್ಯೆ ಎಂದು ಪರಿಗಣಿಸಲು ಪೊಲೀಸರು ನಿರ್ಧರಿಸಿದ್ದರು. ಈ ಬೆನ್ನಲ್ಲೇ ರಶ್ಮಿ ಸಾವಿಗೆ ಬಾಯ್‌ಫ್ರೆಂಡ್ ಸಂತೋಷ್ ಕೈವಾಡವಿದೆ ಅಂತಾ ನಟಿಯ ಪೋಷಕರು ಆರೋಪಿಸಿದ ಬಳಿಕ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ:ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸ್ಯಾಮ್ ಖಡಕ್ ರಿಯಾಕ್ಷನ್

ಸದ್ಯ ನಟಿ ರೇಖಾ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ಬಳಿಕ ನಟಿಯ ಸಾವಿಗೆ ಅಸಲಿ ವಿಚಾರ ಎನು ಎಂಬುದು ಬೆಳಕಿಗೆ ಬರಲಿದೆ. ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಎನ್ನಲಾಗುತ್ತಿದೆ. ರಶ್ಮಿ ಸಾವಿಗೂ ಮುನ್ನ ನನ್ನ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮಾಡುವುದಾಗಿ ಭುವನೇಶ್ವರ ಡಿಸಿಪಿ ಮಾಹಿತಿ ನೀಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *