ಜರ್ಮನಿಯಿಂದ ಭಾರತಕ್ಕೆ ಬಂತು ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ – ಏನಿದರ ವಿಶೇಷತೆ?

ನವದೆಹಲಿ: ಬಹುಮಹಡಿ ಕಟ್ಟಡಗಳ ಬೆಂಕಿಯನ್ನು ನಂದಿಸಲು ಸಹಾಯವಾಗಲಿರುವ ಟರ್ನ್‌ಟೇಬಲ್‌ ಲ್ಯಾಡರ್ ಅಗ್ನಿಶಾಮಕ ಯಂತ್ರ ಜನವರಿ 5ರಂದು ಜರ್ಮನಿಯಿಂದ ಭಾರತಕ್ಕೆ ಬಂದಿದೆ. ಎತ್ತರದ ಏಣಿಯನ್ನು ಹೊಂದಿರುವ ಈ ಯಂತ್ರ ಬಹುಮಹಡಿ ಕಟ್ಟಡದಲ್ಲಿ ಹೊತ್ತಿ ಉರಿಯುವ ಬೆಂಕಿಯನ್ನು ನಂದಿಸಲು ಸಹಾಯವಾಗಲಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ 2 ವರ್ಷಗಳಿಂದ ಈ ಯಂತ್ರವನ್ನು ಭಾರತಕ್ಕೆ ತರಿಸಲು ಸಾಧ್ಯವಾಗಿರಲಿಲ್ಲ. ಈ ಯಂತ್ರವನ್ನು ದೆಹಲಿಯ ಅಗ್ನಿಶಾಮಕ ದಳ, ಜರ್ಮನಿಯಿಂದ ತರಿಸಿದೆ.

ಟರ್ನ್‌ಟೇಬಲ್‌ ಲ್ಯಾಡರ್‌ನ ವಿಶೇಷತೆ:
32 ಮೀಟರ್ ಉದ್ದದ ಏಣಿಯನ್ನು ಹೊಂದಿರುವ ಯಂತ್ರವು ಎಲ್‌ಇಡಿ ಲೈಟ್, ವಾಟರ್ ಮಾನಿಟರ್ ಸಿಸ್ಟಮ್, ಸೆನ್ಸಾರ್‌ಗಳೊಂದಿಗೆ ಶಸ್ತ್ರಸಜ್ಜಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜನವರಿ 5ರಂದು ತರಿಸಲಾದ ಯಂತ್ರವನ್ನು ದೆಹಲಿಯ ಕನ್ನಾಟ್ ಪ್ರದೇಶದ ಅಗ್ನಿಶಾಮಕ ಕೇಂದ್ರದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಯಾವುದೇ ಆರೋಪವಿಲ್ಲದಿದ್ರೂ 3 ವರ್ಷ ಜೈಲುವಾಸ ಅನುಭವಿಸಿದ ಸೌದಿ ರಾಜಕುಮಾರಿ!

ಟರ್ನ್‌ಟೇಬಲ್‌ ಲ್ಯಾಡರ್ ಸ್ವಯಂಚಾಲಿತವಾಗಿದ್ದು, ಸುರಕ್ಷತಾ ವ್ಯವಸ್ಥೆಗಳನ್ನೂ ಒಳಗೊಂಡಿದೆ. ಹೀಗೆ ಇದು ಇತರ ಹೈಡ್ರಾಲಿಕ್ ಯಂತ್ರಗಳಿಗಿಂತಲೂ ಭಿನ್ನವಾಗಿದೆ. ಹೈಡ್ರಾಲಿಕ್ ಸಿಸ್ಟಮ್‌ನ ಯಂತ್ರಗಳಲ್ಲಿ ತೈಲ ಸೋರಿಕೆಯಂತಹ ದೋಷಗಳು ಕಂಡುಬಂದರೆ, ಕಾರ್ಯಾಚರಣೆಯಲ್ಲಿ ಅಡೆತಡೆಯಾಗುತ್ತದೆ. ಆದರೆ ಟರ್ನ್‌ಟೇಬಲ್‌ ಲ್ಯಾಡರ್ ಯಂತ್ರ ಹೈಡ್ರಾಲಿಕ್ ಯಂತ್ರಗಳಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸಂಯೋಜಿತ ಏಕಕಾಲಿಕ ಚಲನೆಗಳೊಂದಿಗೆ ಸಂಪೂರ್ಣ ಸ್ವಯಂಚಾಲಿತ ಟರ್ನ್‌ಟೇಬಲ್‌ ಲ್ಯಾಡರ್ ಎಲ್ಲಾ ಅಗ್ನಿಶಾಮಕ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಅತೀ ಅಗತ್ಯವಾಗಿದೆ. ವಿಶೇಷವಾಗಿ ಎತ್ತರದ ಕಟ್ಟಡಗಳಲ್ಲಿ ಇದರ ಉಪಯೋಗ ಅಪಾರವಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ನಿರ್ದೇಶಕ ಅತುಲ್ ಗಾರ್ಗ್ ಹೇಳಿದರು. ಇದನ್ನೂ ಓದಿ: ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

ಯಂತ್ರವನ್ನು ದೆಹಲಿ ಮೆಟ್ರೋ ನಿಗಮದ ಮೂಲಕ ಜರ್ಮನಿಯಿಂದ ಖರೀದಿಸಲಾಗಿದೆ. ಇದನ್ನು ಬಳಸುವ ಬಗ್ಗೆ ಜರ್ಮನಿ ತಜ್ಞರ ತಂಡದಿಂದ ಅಗ್ನಿಶಾಮಕ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಒಂದು ವಾರದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *