ಆಂಧ್ರ ವ್ಯಕ್ತಿಯ ಕೈ ಹಿಡಿದ ಟರ್ಕಿ ಮಹಿಳೆ

Turkish woman

ಹೈದರಾಬಾದ್: ಟರ್ಕಿ ಮೂಲದ ಮಹಿಳೆಯೊಬ್ಬಳು ಭಾರತೀಯ ಸಂಪ್ರದಾಯ ಪ್ರಕಾರ ಆಂಧ್ರ ಪ್ರದೇಶದ ವ್ಯಕ್ತಿಯ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಳೆ.

ಪ್ರೀತಿಗೆ ಯಾವುದೇ ಸಂಸ್ಕೃತಿ, ಗಡಿ, ಜಾತಿ ಮತ್ತು ಧರ್ಮವಿಲ್ಲ. ಪ್ರೀತಿ ಎಂಬುವುದು ಪವಿತ್ರವಾದಂತಹ ಮತ್ತು ಸುಂದರವಾದಂತಹ ಅನುಭವ. ಇದಕ್ಕೆ ಸಾಕ್ಷಿ ಎಂಬಂತೆ ಟರ್ಕಿ ಮಹಿಳೆ ಆಂಧ್ರ ಪ್ರದೇಶದ ವ್ಯಕ್ತಿ ಜೊತೆಗೆ ಗುಂಟೂರಿನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

ಗುಂಟೂರಿನ ನಿವಾಸಿಯಾಗಿರುವ ವರ ಮಧು ಸಂಕೀರ್ತ್ 2016 ರಲ್ಲಿ ಜಿಜೆಮ್ ಅವರನ್ನು ಕೆಲಸದ ಪ್ರಾಜೆಕ್ಟ್ ವಿಚಾರವಾಗಿ ಭೇಟಿಯಾದರು. ನಂತರ ಇಬ್ಬರು ಆತ್ಮೀಯ ಸ್ನೇಹಿತರಾದರು. ಬಳಿಕ ಮಧು ಕೆಲಸಕ್ಕಾಗಿ ಟರ್ಕಿಗೆ ಹೋಗಬೇಕಾಯಿತು.

ತಮ್ಮ ಮಧ್ಯೆ ಇರುವ ಸ್ನೇಹ ಪ್ರೀತಿಯಾಗಿ ತಿರುವು ಪಡೆಯುತ್ತಿರುವುದನ್ನು ಅರಿತ ಇಬ್ಬರು ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸಿದರು. ಆರಂಭದಲ್ಲಿ ಜಿಜೆಮ್ ಮತ್ತು ಮಧು ಎರಡು ಕುಟುಂಬದವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಕೊನೆಗೆ ತಮ್ಮ ಪೋಷಕರ ಒಪ್ಪಿಗೆ ಮೇರೆಗೆ 2019ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡರು. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

2020ರಲ್ಲಿ ಮದುವೆಯಾಗಲು ಬಯಸಿದ್ದ ಜಿಜೆಮ್ ಮತ್ತು ಮಧು ಕೋವಿಡ್-19 ಕಾರಣದಿಂದಾಗಿ ಮದುವೆಯನ್ನು ಮುಂದೂಡಿದರು. ನಂತರ ಜುಲೈನಲ್ಲಿ ಇಬ್ಬರೂ ಟರ್ಕಿಯಲ್ಲಿ ವಿವಾಹವಾದರು. ಇದೀಗ ಭಾರತೀಯ ಸಾಂಪ್ರದಾಯಿಕ ತೆಲುಗು ಮದುವೆ ಆಚರಣೆಯಲ್ಲಿ ಮತ್ತೆ ವಿವಾಹವಾಗಿದ್ದು, ಈ ವನ ಜೋಡಿಗೆ ಬಂಧುಗಳು ಹಾಗೂ ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.

Comments

Leave a Reply

Your email address will not be published. Required fields are marked *