ಆರೋಪಿ ಪತ್ತೆಗಾಗಿ ದೂರುದಾರನಿಂದ ಬಾಡಿಗೆ ಕಾರು ಕೇಳಿದ ಸಿಪಿಐ ಸಸ್ಪೆಂಡ್‌

ತುಮಕೂರು: ಹಲ್ಲೆ ಪ್ರಕರಣವೊಂದರಲ್ಲಿ ಆರೋಪಿಯನ್ನು ಬಂಧಿಸಲು ದೂರುದಾರನಿಂದಲೇ ಬಾಡಿಗೆ ಕಾರು ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರುವೇಕೆರೆ ಸಿಪಿಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

POLICE

ಸಿಪಿಐ ನವೀನ್‌ ಅಮಾನತುಗೊಂಡ ಅಧಿಕಾರಿ. ಕೇಂದ್ರವಲಯ ಐಜಿಪಿ ಚಂದ್ರಶೇಖರ್ ಅವರು ಅಮಾನತುಗೊಳಿಸಿ ಆದೇಶಿದ್ದಾರೆ. ಇದನ್ನೂ ಓದಿ: ರವಿ ಡಿ.ಚನ್ನಣ್ಣನವರ್‌ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ದಂಡಿನಶಿವರ ಠಾಣಾ ವ್ಯಾಪ್ತಿಯಲ್ಲಿ ನಾಗಮ್ಮ ಎನ್ನುವ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆಗೆ ಸಂಬಂಧಿಸಿದಂತೆ ಆಕೆ ಪತಿ ನಾಗೇಂದ್ರಪ್ಪ, ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ‌ಆದರೆ ಆರೋಪಿಗಳನ್ನು ಬಂಧಿಸದೇ ಪೊಲೀಸರು ನಿರ್ಲಕ್ಷ್ಯವಹಿಸಿದ್ದರು. ಆರೋಪಿಗಳನ್ನು ಬಂಧಿಸಬೇಕೆಂದರೆ ಬಾಡಿಗೆ ಕಾರು ಮಾಡಿಕೊಂಡು ಬರುವಂತೆ ಸಿಪಿಐ ನವೀನ್ ದೂರುದಾರರಿಗೆ ತಾಕೀತು ಮಾಡಿದ್ದರು.

ಆಗ ಎಸ್ಪಿ ರಾಹುಲ್ ಕುಮಾರ್ ಸ್ವತಃ ತಮ್ಮ ಕಾರನ್ನೇ ತುರುವೇಕೆರೆ ಠಾಣೆಗೆ ಕಳುಹಿಸಿ ಸಿಪಿಐ ನವೀನ್‌ಗೆ ಶಾಕ್ ನೀಡಿದ್ದಾರೆ. ಕರ್ತವ್ಯ ಲೋಪದ ಮೇಲೆ ನವೀನ್‌ರನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಭಟ್ಕಳದಲ್ಲಿ ಪಾಕಿಸ್ತಾನಿ ಮಹಿಳೆಗೆ ಆಧಾರ್ ಕಾರ್ಡ್ – ಚುನಾವಣೆ ಆಯೋಗದಿಂದ 100ಕ್ಕೂ ಹೆಚ್ಚು ಅರ್ಜಿಗಳು ವಜಾ

Comments

Leave a Reply

Your email address will not be published. Required fields are marked *