ನೋಡ ನೋಡುತ್ತಿದ್ದಂತೆ ಲಾರಿ ಅಡಿ ಸಿಲುಕಿ ಮೃತಪಟ್ಟ ಬೈಕ್ ಸವಾರ-ವಿಡಿಯೋ ನೋಡಿ

ತುಮಕೂರು: ಬೈಕ್ ಸವಾರನೋರ್ವ ನೋಡ ನೋಡುತ್ತಿದ್ದಂತೆ ಲಾರಿ ಅಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಬೆಸ್ಕಾಂ ಮುಂಭಾಗದಲ್ಲಿ ನಡೆದಿದೆ.

58 ವರ್ಷದ ಲಕ್ಷ್ಮಯ್ಯ ಮೃತ ಸವಾರ. ಹುಳಿಯಾರಿನಲ್ಲಿ ಲಕ್ಷ್ಮಯ್ಯ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಲಕ್ಷ್ಮಯ್ಯ ನಿಧಾನವಾಗಿ ವಾಹನ ಚಲಾಯಿಸುತ್ತಿದ್ರೂ ಪಕ್ಕದಲ್ಲಿ ಬರುತ್ತಿದ್ದ ಲಾರಿಯ ಹಿಂದಿನ ಚಕ್ರಗಳಿಗೆ ಸಿಲುಕಿ ಮೃತಪಟ್ಟಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಲಕ್ಷ್ಮಯ್ಯ ಅವರು ನಿಧಾನವಾಗಿ ತಮ್ಮ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿದ್ದಾರೆ. ಆದ್ರೆ ಹಂಪ್ ದಾಟುವಾಗ ಬ್ಯಾಲೆನ್ಸ್ ತಪ್ಪಿ ಬಲಕ್ಕೆ ಬೀಳುತ್ತಾರೆ. ಪಕ್ಕದಲ್ಲಿ ಗ್ಯಾಸ್ ತುಂಬಿಕೊಂಡು ಬರುತ್ತಿದ್ದ ಲಾರಿಯ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾರೆ. ಲಾರಿ ಸಹ ನಿಧಾನವಾಗಿ ಚಲಿಸುತ್ತಿದ್ರೂ, ಡ್ರೈವರ್ ಎಚ್ಚೆತ್ತುಕೊಳ್ಳುವಷ್ಟರಲ್ಲಿ ದುರ್ಘಟನೆ ನಡೆದಿತ್ತು.

ಅಫಘಾತ ನಡೆಯುತ್ತಿದ್ದಂತೆ ಸ್ಥಳೀಯರೆಲ್ಲಾ ಸೇರಿಕೊಂಡಿದ್ದಾರೆ. ಆದ್ರೆ ಲಕ್ಷ್ಮಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtu.be/Lqc8IxDQuHg

Comments

Leave a Reply

Your email address will not be published. Required fields are marked *