ನಿಮ್ಮೆಲ್ಲಾ ಆಟ ನಿಲ್ಲಿಸ್ಬೇಕು ಇಲ್ಲಾಂದ್ರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡ್ಬೇಕಾಗುತ್ತೆ- ರೌಡಿಗಳ ಚಳಿ ಬಿಡಿಸಿದ ಎಸ್‍ಪಿ

ತುಮಕೂರು: ನಗರದಲ್ಲಿ ಮತ್ತೆ ರೌಡಿಗಳ ಚಟುವಟಿಕೆ ತಲೆ ಎತ್ತಿದ್ದ ಹಿನ್ನೆಲೆಯಲ್ಲಿ ಎಸ್‍ಪಿ ಕೋನವಂಶೀ ಕೃಷ್ಣ ಅವರು ರೌಡಿಗಳ ಚಳಿ ಬಿಡಿಸಿದ್ದಾರೆ.

ತುಮಕೂರಿನ ಚಿಲುಮೆ ಪೊಲೀಸ್ ಸಮುದಾಯ ಭವನದ ಮೈದಾನದಲ್ಲಿ ಇಂದು ರೌಡಿಗಳ ಪರೇಡ್ ಮಾಡಲಾಗಿದೆ. ಪೊಲೀಸ್ ಸಮುದಾಯ ಭವನದ ಮೈದಾನಕ್ಕೆ ತುಮಕೂರು ನಗರ ಹಾಗೂ ಉಪವಿಭಾಗದ 125 ರೌಡಿಗಳು ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಎಸ್‍ಪಿ, ಚುನಾವಣೆ ಬರುತ್ತಿದೆ. ನಿಮ್ಮ ಎಲ್ಲಾ ಆಟ ನಿಲ್ಲಿಸಬೇಕು. ಇಲ್ಲಾ ಅಂದರೆ ಪ್ರೊ ಕಬಡ್ಡಿಯಂತೆ ಪೊಲೀಸ್ ಕಬಡ್ಡಿ ಆಡಬೇಕಾಗುತ್ತದೆ. ಜನರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಕೋನವಂಶೀ ಕೃಷ್ಣ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮನ್ನು ಹೋಗು ಅನ್ನೋಕೆ ನೀನ್ಯಾರು..?- ಪುಂಡನಿಗೆ ನಡುರಸ್ತೆಯಲ್ಲೇ ಪಿಎಸ್‍ಐ ಡಿಚ್ಚಿ

ನಾನು ಮತ್ತೆ ಮತ್ತೆ ಕರೆದು ವಾರ್ನಿಂಗ್ ಮಾಡುವುದಿಲ್ಲ. ಇದೇ ಫಸ್ಟ್ ಆ್ಯಂಡ್ ಲಾಸ್ಟ್. ಯಾರಿಗೂ ನಾನು ಸೆಕೆಂಡ್ ಚಾನ್ಸ್ ಕೊಡುವುದಿಲ್ಲ. ಎಲ್ಲಾ ಆಟವನ್ನು ಬಿಟ್ಟು ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು. ಇದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾವ ಸಮಯದಲ್ಲೂ ಕರೆದರೂ ಬರಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ರೌಡಿಶೀಟರ್ ಕೈನಲ್ಲಿದ್ದ ಟ್ಯಾಟೂ ನೋಡಿ ಎಸ್‍ಪಿ ರಂ

ಬೆಂಗಳೂರು ಸೇರಿದಂತೆ ಹೊರಗಿನ ಕ್ರಿಮಿನಲ್‍ಗಳಿಗೆ ಆಶ್ರಯ ಕೊಡಬೇಡಿ. ಜೈಲಿನಲ್ಲಿರುವ ಕ್ರಿಮಿನಲ್ ಗಳ ಜೊತೆ ಮೊಬೈಲ್ ಸಂಪರ್ಕ ಇಟ್ಟುಕೊಳ್ಳಬಾರದು. ಒಂದು ವೇಳೆ ಅವರ ಅಣತಿಯಂತೆ ನಡೆದುಕೊಳ್ಳುವುದು ಗೊತ್ತಾದ್ರೆ, ನಿಮ್ ಗಳ ಬಾಲ ಕಟ್ ಮಾಡ್ತೀನಿ ಎಂದು ಎಸ್‍ಪಿ ಖಡಕ್ಕಾಗಿಯೇ ನುಡಿದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *