ನಮ್ಮೂರಿಗೆ ರಸ್ತೆ ಇಲ್ಲ ಸರಿಮಾಡಿಸಿ ಎಂದ ಯುವಕನಿಗೆ ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ

ತುಮಕೂರು: ನಮ್ಮೂರಿಗೆ ರಸ್ತೆ ಇಲ್ಲ ಹದಗೆಟ್ಟೋಗಿದೆ ಸ್ವಾಮಿ ರಸ್ತೆ ಹಾಕಿಸಿ ಎಂದು ಯುವಕನೊಬ್ಬ ರಸ್ತೆ ಕೇಳಿದ್ದಕ್ಕೆ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಕಪಾಳಮೋಕ್ಷ ಮಾಡಿದ ಘಟನೆ ಪಾವಗಡದಲ್ಲಿ ನಡೆದಿದೆ.

ವೆಂಕಟರಮಣಪ್ಪ ಇಂದು ಬೆಳಗ್ಗೆ ತಾಲೂಕು ಆಡಳಿತ ಕಛೇರಿ ಆವರಣಕ್ಕೆ ಆಗಮಿಸಿದಾಗ ಯುವಕನೊಬ್ಬ ನಮ್ಮೂರಿಗೆ ರಸ್ತೆ ಇಲ್ಲ ಹದಗೆಟ್ಟೋಗಿದೆ ಸ್ವಾಮಿ. ನಮ್ಮ ಕಡೆ ಕೆಲ ನಾಯಕರು ಕಿವಿಗೊಡುತ್ತಿಲ್ಲ. ತಾವಾದರೂ ರಸ್ತೆ ಹಾಕಿಸಿ. ಸಾರಿಗೆ ಒದಗಿಸಿ ಎಂದಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ವೆಂಕಟರಮಣಪ್ಪ, ಕೆಲಸಕ್ಕೆ ಬಾರದ ಮಾತೆಲ್ಲಾ ಆಡಬೇಡ. ಕಂಬಿ ಹಿಂದೆ ಹಾಕಿಸುತ್ತೇನೆ ಎಂದು ಕಪಾಳಕ್ಕೆ ಹೊಡೆದಿದ್ದಾರೆ. ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದ ಬೊಲೆರೋ- ಮದುವೆ ಮುಗಿಸಿ ವಾಪಸ್ಸಾಗ್ತಿದ್ದ 6 ಮಂದಿ ಸಾವು

ಘಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವೆಂಕಟರಮಣಪ್ಪ, ನಾನು ತಾಲೂಕು ಆಡಳಿತ ಕಛೇರಿಯಲ್ಲಿ ಸಭೆ ಮುಗಿಸಿಕೊಂಡು ಈಚೆ ಬಂದೆ. ಈ ವೇಳೆಯಲ್ಲಿ ನಾಗೆನಹಳ್ಳಿಯ ಹುಡುಗ ಬಂದು ನಮ್ಮ ರಸ್ತೆ ಹಾಳಾಗಿದೆ ಅಂತ ಹೇಳಿದ. ಆ ಸಂದರ್ಭದಲ್ಲಿ ರಸ್ತೆಗೆ ಮೂರುವರೆ ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಗಿದೆ, ಅತಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದೆ. ಅದಕ್ಕೆ ಆ ಹುಡುಗ ನನಗೆ ಕೆಟ್ಟ ಭಾಷೆಯಲ್ಲಿ ಬೈದ. ನಾನೂ ಕೂಡ ಬೈದು ಬುದ್ದಿ ಹೇಳಿ ಕಳುಹಿಸಿದ್ದೇನೆ ಅಷ್ಟೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದನ್ನೂ ಓದಿ: ದೇವರ ಉತ್ಸವದಲ್ಲಿ ಅಡುಗೆ ಮಾಡುವ ಪಾತ್ರೆ ವಿಚಾರಕ್ಕೆ ಕಿರಿಕ್ – ನಾಲ್ವರಿಗೆ ಗಂಭೀರ ಗಾಯ

Comments

Leave a Reply

Your email address will not be published. Required fields are marked *