ತುಮಕೂರು: ಸಿದ್ದಗಂಗಾ ಶ್ರೀಗಳು ಎಂದಾಕ್ಷಣ ಅವರೊಬ್ಬ ಸರ್ವ ಧರ್ಮ ಪ್ರಿಯರು, ಜಾತ್ಯಾತೀತ ಸ್ವಾಮೀಜಿ ಎಂಬ ಭಾವನೆ ಮೂಡುತ್ತದೆ. ಅಂತೆಯೇ ತುಮಕೂರು ನಗರದಾದ್ಯಂತ ಇಂದು ಅವರ ಅಗಲಿಕೆಗೆ ಮುಸ್ಲಿಮರು ಕೂಡ ಸಂತಾಪ ವ್ಯಕ್ತಪಡಿಸಿದ್ದು ಕಂಬನಿ ಮಿಡಿದಿದ್ದಾರೆ.

ನಗರದ ಸಂತೆಪೇಟೆ ಹಾಗೂ ಮೇಲೆ ಪೇಟೆಗಳಲ್ಲಿ ಆಟೋ ಚಾಲಕರು, ತರಕಾರಿ ವ್ಯಾಪಾರಿಗಳೆಲ್ಲಾ ಒಟ್ಟಾಗಿ ಹಿಂದು ಸಂಪ್ರದಾಯದಂತೆ ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದ್ದಾರೆ. ಅಲ್ಲದೇ ಇಸ್ಲಾಂ ಧರ್ಮದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಧರ್ಮಗಳ, ಕಡು-ಬಡ ನಿರ್ಗತಿಕ ಮಕ್ಕಳಿಗೆ ಆಶ್ರಯ ಕಲ್ಪಿಸಿ, ಉನ್ನತ ಸ್ಥಾನಕ್ಕೇರಲು ಸಹಕಾರಿಯಾದ ಸಿದ್ದಗಂಗಾ ಶ್ರೀಗಳಿಗೆ ಭಾರತ ಸರ್ಕಾರ, ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದ್ರು.

ವಿವಿಧೆಡೆಗಳಿಂದ ಆಗಮಿಸಿರುವ ಶ್ರೀಗಳ ಭಕ್ತರಿಗಾಗಿ ಮುಸ್ಲಿಮರು ಸಿಹಿ ಖಾದ್ಯ ಹಾಗೂ ಉಪಹಾರ ವ್ಯವಸ್ಥೆ ಕೂಡ ಕಲ್ಪಿಸಿದ್ದಾರೆ.
https://www.youtube.com/watch?v=ELiv_cSa5PM
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply