ನ್ಯೂಯಾರ್ಕ್: ಸುದ್ದಿಗೋಷ್ಠಿಯಲ್ಲಿ ಭಾರತ ಹಾಗೂ ಕಾಶ್ಮೀರದ ಬಗ್ಗೆ ಪ್ರಶ್ನಿಸಿದ ಪಾಕ್ ವರದಿಗಾರರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಖತ್ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ವೇದಿಕೆ ಮೇಲೆಯೇ ಪಾಕ್ ಪ್ರಧಾನಿಯ ಮಾರ್ಯದೆ ತೆಗೆದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಟ್ರಂಪ್ ಇಮ್ರಾನ್ ಖಾನ್ಗೆ ಹೇಳಿದ ಡೈಲಾಗ್ ಇಟ್ಟುಕೊಂಡು ಪಾಕಿಸ್ತಾನವನ್ನು ಎಲ್ಲೆಡೆ ಟ್ರೋಲ್ ಮಾಡಲಾಗುತ್ತಿದೆ. ವೇದಿಕೆ ಮೇಲೆ ಇಮ್ರಾನ್ ಖಾನ್ ಹಾಗೂ ಟ್ರಂಪ್ ಕುಳಿತು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಪಾಕ್ ವರದಿಗಾರರೊಬ್ಬರು ಕಾಶ್ಮೀರದ ಬಗ್ಗೆ ಟ್ರಂಪ್ ಅವರಿಗೆ ಪ್ರಶ್ನಿಸಿದರು. ಭಾರತ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿದ ಬಳಿಕ ಅಲ್ಲಿನ ಜನತೆ ಕಷ್ಟ ಅನುಭವಿಸುತ್ತಿದ್ದಾರೆ. ಇಂಟರ್ನೆಟ್ ಹಾಗೂ ಫೋನ್ ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸಿದ್ದಾರೆ. ಈ ಬಗ್ಗೆ ನೀವ್ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಕೇಳಿದರು.
MORE INSULT for Pakistan 😂😂 US President Donald Trump TROLLS Pаkistani Reporters. "Are you a member of Imran's team You’re saying a statement not a question" Asks Imran Khan "Where do you find reporters like this? I like this reporter" 😂😂 "These guys are fantastic" 😂😂 pic.twitter.com/YVzxUKYOjs
— Rosy (@rose_k01) September 24, 2019
ಇದಕ್ಕೆ ಉತ್ತರಿಸಿದ ಟ್ರಂಪ್, ಇವರು ನಿಮ್ಮ ತಂಡದವರಾ? ಇಂಥವರನ್ನ ಎಲ್ಲಿಂದ ಹುಡುಕಿ ಇಲ್ಲಿಗೆ ಕರ್ಕೊಂಡು ಬರುತ್ತೀರಾ? ಇವರೆಲ್ಲಾ ಅದ್ಭುತ ವ್ಯಕ್ತಿಗಳು ಎಂದು ಪಕ್ಕದಲ್ಲಿದ್ದ ಇಮ್ರಾನ್ ಖಾನ್ ಅವರಿಗೆ ಹೇಳಿ ಕಾಲೆಳೆದರು. ಮಾತು ಮುಂದುವರಿಸಿ, ನೀವು ಪ್ರಶ್ನೆ ಕೇಳುತ್ತಿಲ್ಲ, ನಿಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದೀರಿ ಎಂದು ಉತ್ತರಿಸಿ ವರದಿಗಾರನ ಬಾಯಿ ಮುಚ್ಚಿಸಿದರು.
https://twitter.com/dhaval241086/status/1176224796679397376
ಈ ವಿಡಿಯೋ ವಿಶ್ವಾದ್ಯಂತ ಸಖತ್ ವೈರಲ್ ಆಗಿದ್ದು, ಎಲ್ಲೆಡೆ ಪಾಕಿಸ್ತಾನ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಅದರಲ್ಲೂ ಭಾರತೀಯರು ವಿಡಿಯೋ ಶೇರ್ ಮೇಲೆ ಶೇರ್ ಮಾಡಿಕೊಂಡು, ಟ್ರೋಲ್ಗಳನ್ನು ಮಾಡುತ್ತ ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ. ನಿಮ್ಮ ಬುದ್ಧಿ ನಮಗಷ್ಟೇ ಅಲ್ಲ ದೂರದ ಅಮೆರಿಕಕ್ಕೂ ಗೊತ್ತು ಎಂದು ಭರ್ಜರಿ ಕಮೆಂಟ್ ಮಾಡಿ ಟೀಕಿಸುತ್ತಿದ್ದಾರೆ.
All Pakistan channels covering @ImranKhanPTI @POTUS conference in newyork mysteriously going silent when one reporter asked trump about Kashmir human rights and Trump's answer "where do you get reporters like these" fake @peaceforchange pic.twitter.com/pKepqrzLlw
— Arjun ਸਿੰਘ🇮🇳 (@Arjunsingh023) September 23, 2019
ಈ ಮೂಲಕ ಮತ್ತೆ ಪಾಕಿಸ್ತಾನ ತನ್ನ ಮರ್ಯಾದೆಯನ್ನು ತಾನೇ ಅಂತರಾಷ್ಟ್ರೀಯ ಮಟ್ಟದಲ್ಲಿ ಕಳೆದುಕೊಂಡಿದೆ. ಮತ್ತೆ ತನ್ನ ಅತೀ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ನಗೆಪಾಟಲಿಗೆ ಕಾರಣವಾಗಿದೆ. ಸ್ವಲ್ಪ ಅವಕಾಶ ಸಿಕ್ಕರೆ ಸಾಕು ಭಾರತದ ಮರ್ಯದೆ ತೆಗೆಯೋಣ ಎಂದು ಹೊಂಚು ಹಾಕುವ ಪಾಕಿಸ್ತಾನ ಮತ್ತೆ ಮತ್ತೆ ಸೋಲನ್ನೇ ಅನುಭವಿಸುತ್ತಿದೆ. ಅತೀ ಬುದ್ಧಿವಂತಿಕೆ ತೋರಲು ಹೋಗಿ ಮರ್ಯಾದೆ ತೆಗೆದುಕೊಂಡು ಟ್ರೋಲ್ ಆಗೋದೆ ಪಾಕಿಗೆ ಅಭ್ಯಸವಾಗಿಬಿಟ್ಟಿದೆ.

Leave a Reply