– ಚೀನಾಗೂ ತೈಲ ಖರೀದಿ ನಿಲ್ಲಿಸುವಂತೆ ಹೇಳಬೇಕು
ವಾಷಿಂಗ್ಟನ್: ಭಾರತ (India) ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದರು.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ (PM Modi) ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್

ಈ ಎಲ್ಲ ಕಾರಣಗಳಿಂದ ಮೋದಿ ಅವರು ರಷ್ಯಾದಿಂದ ತೈಲ (Russian Oil) ಖರೀದಿಸುವುದಿಲ್ಲ ಎಂದು ಭರವಸೆ ನೀಡಿದರು. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದರಲ್ಲದೇ ಇಂಧನ ನೀತಿಯಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ಮೋದಿ ನನ್ನ ಆಪ್ತ ಮಿತ್ರ ಎಂದರು.
ಇನ್ನೂ ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಭಾರತವನ್ನ ವಿಶ್ವಾಸಾರ್ಹ ಪಾಲುದಾರ ಎಂದು ನೀವು ಪರಿಗಣಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಮೋದಿ ನನ್ನ ಸ್ನೇಹಿತ, ಭಾರತದೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು. ಆದ್ರೆ ಟ್ರಂಪ್ ಹೇಳಿಕೆ ಬಗ್ಗೆ ಈವರೆಗೆ ಭಾರತ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್ – ಪಾಕ್ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್

ಅಮೆರಿಕದ ಆರೋಪ ಏನು?
ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ. ಇದನ್ನೂ ಓದಿ: ಟ್ರಂಪ್ ಇಲ್ಲದಿದ್ರೆ ಭಾರತ-ಪಾಕ್ ಪರಮಾಣು ಸಂಘರ್ಷದಲ್ಲಿ ಯಾರೋಬ್ಬರೂ ಉಳಿಯುತ್ತಿರಲಿಲ್ಲವೇನೋ: ಪಾಕ್ ಪಿಎಂ
