ವಿಡಿಯೋ: ಕೆಜೆ ಜಾರ್ಜ್ ಕ್ಷೇತ್ರದಲ್ಲಿ ವಾರಗಳ ಹಿಂದಷ್ಟೆ ರಸ್ತೆ ಕಾಮಗಾರಿ- ಮಳೆಗೆ 8 ಅಡಿ ಭೂಕುಸಿತವಾಗಿ ಮಗುಚಿ ಬಿದ್ದ ಲಾರಿ!

-ಸರ್ವಜ್ಞನಗರಕ್ಕೆ 300 ಕೋಟಿ ರೂ. ಅನುದಾನ ಪಡೆದಿರೋ ಕೆ.ಜೆ ಜಾರ್ಜ್

ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಭೂ ಕುಸಿತ ಉಂಟಾಗಿ ಲಾರಿಯೊಂದು ಮಗುಚಿ ಬಿದ್ದ ಘಟನೆ ನಡೆದಿದೆ.

ಕೆಲ ವಾರಗಳ ಹಿಂದೆಯಷ್ಟೇ ಸರ್ವಜ್ಞ ನಗರದ ಕಾಕ್ಸ್ ಟೌನ್‍ನ ಜೀವನಹಳ್ಳಿಯ ಈ ರಸ್ತೆಯಲ್ಲಿ ಕಾಮಗಾರಿ ನಡೆಸಲಾಗಿತ್ತು. ಶುಕ್ರವಾರ ರಾತ್ರಿ ನಗರದಲ್ಲಿ ಭಾರೀ ಮಳೆಯಾಗಿದ್ದು, ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ನಿನ್ನೆ ಬಿದ್ದ ಮಳೆಗೆ ಸುಮಾರು 8 ಅಡಿಯಷ್ಟು ಭೂ ಕುಸಿತ ಉಂಟಾಗಿ ಲಾರಿಯೊಂದು ಉರುಳಿ ಬಿದ್ದಿದೆ.

ಮೂರು ವರ್ಷಗಳಿಂದ ರಾಜ್ಯ ಸರ್ಕಾರದ ಅನುದಾನ, ಕೇಂದ್ರ ಸರ್ಕಾರದ ಅನುದಾನ, ಬಿಬಿಎಂಪಿಯ ವಿಶೇಷ ಅನುದಾನಗಳು ಸೇರಿದಂತೆ ಬರೋಬ್ಬರಿ 310 ಕೋಟಿ ರೂಪಾಯಿ ಅನುದಾನವನ್ನು ಸರ್ವಜ್ಞ ನಗರಕ್ಕೆ ಪಡೆದುಕೊಂಡಿದ್ದಾರೆ ಕೆ.ಜೆ ಜಾರ್ಜ್.

ಈ ಬಾರಿ ಬಿಬಿಎಂಪಿ ಬಜೆಟ್‍ನಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಅನುದಾನವನ್ನ ಕೆಜೆ ಜಾರ್ಜ್ ತಮ್ಮ ಕ್ಷೇತ್ರಕ್ಕೆ ಪಡೆದುಕೊಂಡಿರೋ ಮಾಹಿತಿ ಪಬ್ಲಿಕ್‍ ಟಿವಿಗೆ ಲಭ್ಯವಾಗಿದೆ. ಆದ್ರೆ ಇಷ್ಟೆಲ್ಲ ಅನುದಾನ ಪಡೆದಿರೋ ಕೆಜೆ ಜಾರ್ಜ್ ಪ್ರತಿನಿಧಿಸೋ ಸರ್ವಜ್ಞನಗರದಲ್ಲಿ ಕುಡಿಯೋ ನೀರಿನ ಸಮಸ್ಯೆ, ಕಿತ್ತು ನಿಂತಿರೋ ರಸ್ತೆಗಳು, ಅಪಘಾತಕ್ಕೆ ಅಹ್ವಾನಿಸೋ ಪಾಟ್ ಹೋಲ್ಸ್ ಗಳಿವೆ.

https://www.youtube.com/watch?v=YuRp_bbtNNw&spfreload=10

Comments

Leave a Reply

Your email address will not be published. Required fields are marked *