BBK 11: ‘ರಾಧಾ ಕೃಷ್ಣ’ರಂತೆ ಇದ್ದೀರಾ: ಭವ್ಯಾಗೆ ನೇರವಾಗಿ ಹೇಳಿದ ತ್ರಿವಿಕ್ರಮ್‌ ತಾಯಿ

‘ಬಿಗ್ ಬಾಸ್ ಕನ್ನಡ 11’ರ ಶೋ (Bigg Boss Kannada 11) ಇದೀಗ 100ನೇ ದಿನದತ್ತ ಮುನ್ನುಗ್ಗುತ್ತಿದೆ. ದೊಡ್ಮನೆಯಲ್ಲಿ ಈಗ ಫ್ಯಾಮಿಲಿ ರೌಂಡ್‌ ಶುರುವಾಗಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು, ಸ್ಪರ್ಧಿಗಳಿಗೆ ಹೊಸ ಟಾಸ್ಕ್ ನೀಡಲಾಗಿದೆ. ಟಾಸ್ಕ್‌ ಗೆದ್ದವರಿಗೆ ತಮ್ಮ ಮನೆಯವರನ್ನು ಭೇಟಿ ಮಾಡುವ ಅವಕಾಶ ಕೊಡುತ್ತಾರೆ ಬಿಗ್‌ ಬಾಸ್. ಈ ಮೂಲಕ ‘ಬಿಗ್‌ ಬಾಸ್‌’ ಸ್ಪರ್ಧಿಗಳಿಗೆ ಟ್ವಿಸ್ಟ್‌ ಕೊಟ್ಟಿದ್ದಾರೆ.

ಮನೆಯಲ್ಲಿ ‘ಬಿಗ್ ಬಾಸ್’ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ, ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ (Trivikram) ಅವರು, ಒಂದು ಚಿತ್ರವನ್ನು ಜೋಡಿಸುವ ಟಾಸ್ಕ್ ಅನ್ನು ಫುಲ್ ಟೆನ್ಷನ್‌ನಲ್ಲಿ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮುಖ್ಯದ್ವಾರ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್ ಅವರ ತಾಯಿ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್, ಯಶ್, ಉಪ್ಪಿ ಸರ್, ಶಿವಣ್ಣ ಸೇರಿದ್ರೆನೆ ಕನ್ನಡ ಚಿತ್ರರಂಗ – ಸುದೀಪ್‌

ಈ ವೇಳೆ ತ್ರಿವಿಕ್ರಮ್, ಅವರ ತಾಯಿಯ ಆಶೀರ್ವಾದವನ್ನು ಎಲ್ಲಾ ಸ್ಪರ್ಧಿಗಳು ಪಡೆದರು. ತ್ರಿವಿಕ್ರಮ್‌ ಅವರ ತಾಯಿಯನ್ನು ಭವ್ಯಾ ತಬ್ಬಿಕೊಂಡು ಖುಷಿಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನಿಗೆ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಬೆಂಬಲವಾಗಿ ನಿಂತಿದ್ದೀಯಾ. ರಾಧಾ ಕೃಷ್ಣನ ತರ ಇದ್ದೀರಿ ಎಂದು ತ್ರಿವಿಕ್ರಮ್ ತಾಯಿ ಭವ್ಯಾರನ್ನು (Bhavya Gowda) ಮೆಚ್ಚಿದ್ದಾರೆ. ಅವರ ಮಾತಿನಿಂದ ಭವ್ಯಾ ನಾಚಿ ನೀರಾಗಿದ್ದಾರೆ.

ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ನೀಡದ ಹಿನ್ನೆಲೆ ಅವರ ತಾಯಿ ಮನೆಯಿಂದ ಹೊರನಡೆದರು. ಆಗ ತ್ರಿವಿಕ್ರಮ್ ಕಣ್ಣೀರು ಹಾಕಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಮನೆಗೆ ಭವ್ಯಾ ಅವರ ತಾಯಿ ಮತ್ತು ಸಹೋದರಿ ಕೂಡ ಎಂಟ್ರಿ ಕೊಟ್ಟಿದ್ದಾರೆ.