ಗಂಡನ ಶಿರಚ್ಛೇದ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ದೇಗುಲದಲ್ಲಿ ಕೂತಿದ್ಲು!

ಅಗರ್ತಲಾ: ಮಹಿಳೆಯೊಬ್ಬಳು ಇಂದು ಮುಂಜಾನೆ ದೇವಸ್ಥಾನದಲ್ಲಿ ತನ್ನ 50 ವರ್ಷದ ಗಂಡನ ಶಿರಚ್ಛೇದ ಮಾಡಿ ತಲೆಯನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕುಳಿತ್ತಿದ್ದ ಆಘಾತಕಾರಿ ಘಟನೆ ತ್ರಿಪುರದ ಖೋವೈನಲ್ಲಿ ನಡೆದಿದೆ.

ಇಂದಿರಾ ಕಾಲೋನಿ ಗ್ರಾಮದಲ್ಲಿ ಮಹಿಳೆ, ಪತಿ ರವೀಂದ್ರ ತಂತಿ ಮತ್ತು ಇಬ್ಬರು ಪುತ್ರರೊಂದಿಗೆ ವಾಸಿಸುತ್ತಿದ್ದಳು. ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ದಂಪತಿ ಹಿರಿಯ ಮಗ ತನ್ನ ತಾಯಿ ಇತ್ತೀಚೆಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಅಲ್ಲದೆ ಆಕೆಗೆ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದೆವು ಎಂದು ಪೊಲೀಸರಿಗೆ ವಿವರಿಸಿದರು. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

ಖೋವಾಯ್ ಪೊಲೀಸ್ ವರಿಷ್ಠಾಧಿಕಾರಿ ಭಾನುಪಾದ ಚಕ್ರವರ್ತಿ ಈ ಕುರಿತು ಮಾಹಿತಿ ನೀಡಿದ್ದು, ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಘಟನೆ ಬಗ್ಗೆ ವಿವರಿಸಿದ ಹಿರಿಯ ಪುತ್ರ, ನನ್ನ ತಾಯಿ ಸಸ್ಯಾಹಾರಿಯಾಗಿದ್ದಳು. ಆದರೆ ನಿನ್ನೆ ರಾತ್ರಿ ಅವರು ಚಿಕನ್ ಸೇವಿಸಿದ್ದಳು. ಇದರಿಂದ ನಮಗೆ ಗಾಬರಿಯಾಯಿತು. ನಾವೆಲ್ಲರೂ ಮಲಗಲು ಹೋದೆವು. ಇದ್ದಕ್ಕಿದ್ದಂತೆ ನನಗೆ ಎಚ್ಚರಿಕೆ ಆಯ್ತು. ಆಗ ನನ್ನ ತಾಯಿ, ತಂದೆಯ ಶಿರಚ್ಛೇದ ಮಾಡುವುದನ್ನು ನೋಡಿದೆ. ಈ ವೇಳೆ ನನ್ನ ತಾಯಿ ರಕ್ತಸಿಕ್ತವಾಗಿ ಕುಳಿತುಕೊಂಡಿದ್ದಳು. ಈ ದೃಶ್ಯ ನೋಡಿ ನನಗೆ ಆಘಾತವಾಯಿತು. ನಂತರ ಆಕೆ ರೂಮಿನಿಂದ ಹೊರಗೆ ಧಾವಿಸಿ ನಮ್ಮ ದೇವಸ್ಥಾನದಲ್ಲಿ ತಂದೆಯ ತಲೆಯನ್ನು ಇಟ್ಟು ಕುಳಿತುಕೊಂಡಳು ಎಂದು ವಿವರಿಸಿದನು.

ಸ್ಥಳೀಯರು ದೃಶ್ಯ ನೋಡಿ ಗಾಬರಿಗೊಂಡಿದ್ದು, ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪ್ರಸ್ತುತ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾತ್ರಿಯೆಲ್ಲಾ ಮೋಜು ಮಸ್ತಿ – ಬೆಳಗ್ಗೆ ಯುವಕ ಶವವಾಗಿ ಪತ್ತೆ

ಫೋರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ಆರೋಪಿಯ ಮಾನಸಿಕ ಅಸ್ವಸ್ಥತೆಯ ಬಗ್ಗೆ, ವೈದ್ಯರ ವರದಿಯಿಲ್ಲದೆ ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಚಕ್ರವರ್ತಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *