ಅಗರ್ತಲಾ: ಬಿಜೆಪಿ ಕಾರ್ಯಕರ್ತರೊಬ್ಬರ ಮೃತದೇಹ ತ್ರಿಪುರ ರಾಜ್ಯದ ಕಾಂಚನಾಪುರ ವಿಭಾಗದ ಶ್ರೀರಾಂಪುರದ ಚರಂಡಿಯಲ್ಲಿ ಪತ್ತೆಯಾಗಿದೆ.
45 ವರ್ಷದ ಸುನಿಲ್ ದೇಬ್ ಎಂಬವರೇ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತ. ಶನಿವಾರ ಬೆಳಗ್ಗೆ ಸುನಿಲ್ ಮೃತದೇಹ ಶ್ರೀರಾಂಪುರದ ಚರಂಡಿಯಲ್ಲಿ ಪತ್ತೆಯಾಗಿದೆ. ಮೊಣಕಾಲಿನ ಕೆಳಗಡೆ ಎರಡು ಕಡೆ ಹರಿತವಾದ ಗಾಯಗಳಾಗಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸುನಿಲ್ ಮೃತದೇಹ ಮೊಣಕಾಲಿನ ಕೆಳಭಾಗದಲ್ಲಿ ಎರಡು ಹರಿತವಾದ ಗಾಯಗಳಾಗಿವೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಎಸ್‍ಪಿ ಹರ್ ಕುಮಾರ್ ದಬ್ಬರಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದು ಕೇರಳದ ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಹೋಲುತ್ತದೆ ಎಂದು ಬಿಜೆಪಿಯ ವಕ್ತಾರ ಮಿರ್ನಲ್ ಕಾಂತಿ ದೇಬ್ ಎಂದು ಹೇಳಿದ್ದಾರೆ. ಘಟನೆ ಸಂಬಂಧ ಕಾಂಚನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Reply