ಹೋಂ ಐಸೋಲೇಷನ್‍ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ: ತ್ರಿಲೋಕ್ ಚಂದ್ರ

ಬೆಂಗಳೂರು: ಕೊರೋನಾದಿಂದ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಕೆಲಸಕ್ಕೆ ಮರಳಿದಾಗ ಅವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ. ಐಟಿಬಿಟಿ, ಖಾಸಗಿ ಕಂಪನಿಗಳು ನೌಕರರಿಗೆ ನೆಗೆಟಿವ್ ರಿಪೋರ್ಟ್ ಕೇಳುವಂತಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಖಡಕ್ ಸೂಚನೆ ನೀಡಿದರು.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿನ ಯಾವುದೇ ಲಕ್ಷಣ ಇಲ್ಲದಿದ್ದರೆ ಹೋಂ ಐಸೋಲೇಷನ್‍ನಿಂದ ಹೊರ ಬರಬಹುದು. 7 ದಿನಗಳ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸುವಂತಿಲ್ಲ. ಕಂಪನಿಗಳಲ್ಲಿ ನೆಗೆಟಿವ್ ರಿಪೋರ್ಟ್ ಕೇಳಿದರೆ, ಬಿಬಿಎಂಪಿಗೆ ತಿಳಿಸಬೇಕು. ಐಸಿಎಂಆರ್ ಸಲಹೆಯಂತೆ ಕೇಂದ್ರ ಹಾಗೂ ಮಾರ್ಗಸೂಚಿಯನ್ನು ಉಲ್ಲಂಘಿಸುವಂತಿಲ್ಲ ಎಂದು ಮಾಹಿತಿ ನೀಡಿದರು.

ಈಗಾಗಲೇ ಬೆಂಗಳೂರಿನಲ್ಲೂ ಕೊರೋನಾ ಟೆಸ್ಟ್ ಇಳಿಕೆಯಾಗಿದ್ದು, ವಲಯವಾರು ಪಾಸಿಟಿವ್ ರೇಟ್ ಮಾತ್ರ ಯಥಾಸ್ಥಿತಿ ಮುಂದುವರಿಯುತ್ತಿದೆ. ಶೇ.20 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟು ಎಲ್ಲಾ ವಲಯಗಳಲ್ಲೂ ದಾಖಲಾಗಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್

ಸದ್ಯ ಕೊರೋನಾ ಸಕ್ರಿಯ ಕೇಸ್‍ನಲ್ಲಿ ದೇಶದಲ್ಲೇ ಕರ್ನಾಟಕ ನಂಬರ್ 1 ಸ್ಥಾನದಲ್ಲಿದ್ದು, ರಾಜ್ಯದಲ್ಲಿ 4 ಲಕ್ಷದ ಸನಿಹಕ್ಕೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ದೇಶದ ದಾಖಲಾಗಿರುವ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 12%ರಷ್ಟು ಸಕ್ರಿಯ ಪ್ರಕರಣಗಳು ರಾಜ್ಯದ್ದೇ ಆಗಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳು 22.50 ಲಕ್ಷ ಕೇಸ್‍ಗಳು ವರದಿಯಾಗಿದ್ದು, ರಾಜ್ಯದಲ್ಲಿ 3,57,826 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ರಾಜಕಾರಣದಲ್ಲಿ ಹೊಗೆ ಆಡೋದಕ್ಕೆ, ಸುದ್ದಿ ಬರೋದಕ್ಕೆ ಕಾರಣ ಇರಬೇಕು ಅಂತಿಲ್ಲ: ಸಿ.ಟಿ.ರವಿ

Comments

Leave a Reply

Your email address will not be published. Required fields are marked *