ಪತಿ ಭಯಕ್ಕೆ ಮಗುವನ್ನು ಬಿಟ್ಟು ಹೋದ್ಲು – ಪಶ್ಚಾತ್ತಾಪದಿಂದ ಮಗುವನ್ನು ಮರಳಿ ಪಡೆದ್ಲು

ಚೆನ್ನೈ: ಪತಿಯ ಭಯಕ್ಕೆ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದ ತಾಯಿ ನಂತರ ಪಶ್ಚಾತ್ತಾಪಪಟ್ಟು ಮಗುವನ್ನು ಮರಳಿ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ 25 ವರ್ಷದ ಮಹಿಳೆಗೆ ಪತಿ ಬೆದರಿಸಿದ ಹಿನ್ನೆಲೆ ಮಗುವನ್ನು ತಿರುಚ್ಚಿಯ ಆಸ್ಪತ್ರೆಯೊಂದರ ಹೊರಗೆ ಬಿಟ್ಟು ಹೋಗಿದ್ದಳು. ಆದರೆ ಈ ವೇಳೆ ಕೆಲವು ಕಟ್ಟಡ ಕಾರ್ಮಿಕರು ಮಗುವನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಗುವನ್ನು ವಶಪಡಿಸಿಕೊಂಡು ತಿರುಚ್ಚಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ಅಲ್ಲದೇ ಮಗುವಿನ ಪೋಷಕರನ್ನು ಹುಡುಕಲು ಆರಂಭಿಸಿದ್ದರು. ವಿಚಿತ್ರವೆಂದರೆ ಜನವರಿ 27ರ ಬೆಳಗ್ಗೆ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಮಗು ತನ್ನದೆಂದು ತಿಳಿಸಿದ್ದಾಳೆ. ಮಗುವನ್ನು ತಾನೇ ಬಿಟ್ಟುಹೋಗಿದ್ದು, ನಂತರ ಮಗುವನ್ನು ಮರಳಿ ಹೋದಾಗ ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿರುವುದಾಗಿ ಹೇಳಿದ್ದಾಳೆ.

POLICE JEEP

ನಂತರ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆ ಪತಿಯ ಒತ್ತಡದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿ ಪಶ್ಚಾತಾಪಪಟ್ಟಿದ್ದಾಳೆ. ಸದ್ಯ ಮಗುವಿಗೆ ಇನ್ನೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಭ್ರಷ್ಟಾಚಾರದಲ್ಲೇ ಬಿಜೆಪಿ ಸರ್ಕಾರ ಕಾಲ ಕಳೆಯುತ್ತಿದೆ: ಪ್ರಿಯಾಂಕ್ ಖರ್ಗೆ


Woman, Baby, Police Station, Tamil Nadu

Comments

Leave a Reply

Your email address will not be published. Required fields are marked *