ಬೆಂಗಳೂರಲ್ಲಿ ಟ್ರಯಾಂಗಲ್ ಲವ್ ಸ್ಟೋರಿಗೆ ಯುವಕ ಬಲಿ

– ಭೇಟಿಯಾಗಲು ಕರೆದಿದ್ದ ಮಾಜಿ ಲವ್ವರ್‌; ಪ್ರೇಯಸಿ ಎದುರೇ ಹಾಲಿ ಪ್ರೇಮಿಯಿಂದ ಕೊಲೆ

ಬೆಂಗಳೂರು: ಇಬ್ಬರು ಯುವಕರು ಒಂದೇ ಯುವತಿಯನ್ನು ಪ್ರೀತಿಸಿ ಗಲಾಟೆ ನಡೆದು ಓರ್ವ ಯುವಕನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ತಿಲಕ್‌ನಗರದಲ್ಲಿ ನಡೆದಿದೆ.

ಕಿರಣ್ ಮತ್ತು ಯುವತಿ ಕಳೆದ ಕೆಲ ತಿಂಗಳ ಹಿಂದೆ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಅವರಿಬ್ಬರ ನಡುವೆ ವೈಮನಸ್ಸು ಮೂಡಿ, ಯುವತಿ ಮತ್ತೊಬ್ಬ ಯುವಕ ಜೀವನ್ ಜೊತೆಗೆ ಒಡಾಡುತ್ತಿದ್ದಳು. ಇದನ್ನೂ ಓದಿ: ಕುಟುಂಬಸ್ಥರ ಚಿಕಿತ್ಸೆಗಾಗಿ ಭಿಕ್ಷೆ ಬೇಡಿದ ಜನ – ಮೈಸೂರಲ್ಲೊಂದು ಮನಕಲಕುವ ಘಟನೆ

ಈ ವಿಚಾರ ತಿಳಿದ ಕಿರಣ್, ಯುವತಿಗೆ ಕರೆ ಮಾಡಿ ಮೀಟ್ ಮಾಡುವಂತೆ ಹೇಳಿದ್ದ. ಯುವತಿ ಬರುವಾಗ ಜೀವನ್ ಜೊತೆಗೆ ಬಂದಿದ್ದಳು. ಈ ವೇಳೆ ಮೂವರ ನಡುವೆ ಗಲಾಟೆ ನಡೆದು ಜೀವನ್, ಕಿರಣ್ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಈ ಸಂಬಂಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಾದ ಜೀವನ್ ಮತ್ತು ಯುವತಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಸಕ ಸತೀಶ್ ಸೈಲ್‌ಗೆ 7 ದಿನಗಳ ಮಧ್ಯಂತರ ಜಾಮೀನು ಮಂಜೂರು