ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ- ಸವಾರನ ಕಾಲು ಮುರಿತ, ತಲೆಗೆ ಗಂಭೀರ ಗಾಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ (Rain) ಯಿಂದಾಗುವ ಅವಾಂತರಗಳು ನಿಂತಿಲ್ಲ. ಇಂದು (ಬುಧವಾರ) ಬೆಳಗ್ಗೆ ಜೆಪಿನಗರದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರದ ರೆಂಬೆ ಬಿದ್ದು ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಶ್ರೀಧರ್ ಗಾಯಗೊಂಡ ದ್ವಿಚಕ್ರ ವಾಹನ ಸವಾರ. ಇವರು ಇಂದು ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಜೆ.ಪಿ.ನಗರ 21ನೇ ಮುಖ್ಯರಸ್ತೆಯಲ್ಲಿ ಮರದ ಕೊಂಬೆ ಬೈಕ್ ಮೇಲೆ ಬಿದ್ದಿದೆ. ಪರಿಣಾಮವಾಗಿ ಶ್ರೀಧರ್ ಕಾಲು ಮುರಿದು ಹೋಗಿದ್ದು, ತಲೆಗೂ ಗಂಭೀರ ಗಾಯವಾಗಿದೆ. ಅಲ್ಲದೆ ಬೈಕ್ ಕೂಡ ಜಖಂಗೊಂಡಿದೆ. ಕೂಡಲೇ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರಗಳ ನಿರ್ವಹಣೆಯನ್ನು ಪಾಲಿಕೆ ಸರಿಯಾಗಿ ನಿಭಾಯಿಸದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 30ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ತಿದ್ದ ಬಸ್ ಪಲ್ಟಿ- 7 ಮಂದಿ ಗಂಭೀರ