ಸಾರಿಗೆ ಪ್ರೊಟೆಸ್ಟ್ ನಡೆದ್ರೂ ಬಸ್ ಬಂದ್ ಆಗಲ್ಲ- 10 ಸಾವಿರ ಸಿಬ್ಬಂದಿಯಿಂದ ಪ್ರತಿಭಟನೆ

– ಫ್ರೀಡಂ ಪಾರ್ಕ್ ಸುತ್ತ ಟ್ರಾಫಿಕ್ ಜಾಮ್ ಫಿಕ್ಸ್

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಸಾರಿಗೆ ಕಾರ್ಮಿಕರ ಉಪವಾಸ ಸತ್ಯಾಗ್ರಹ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಅರ್ಧಕ್ಕೆ ಅರ್ಧದಷ್ಟು ಬಿಬಿಎಂಪಿ ಬಸ್ಸುಗಳ ಓಡಾಟ ಕಡಿಮೆಯಾಗಿದೆ.

ಪ್ರಯಾಣಿಕರ ಸಂಖ್ಯೆ ಸಹ ವಿರಳವಾಗಿದೆ. ಶಿಫ್ಟ್ ಗಳನ್ನು ನೋಡಿಕೊಂಡು ಸಾರಿಗೆ ಸಿಬ್ಬಂದಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸೋ ಸಾಧ್ಯತೆ ಇದೆ. ಜೊತೆಗೆ, ಮೊದಲೇ ಹಲವರು ರಜೆ ಪಡೆದಿರೋದ್ರಿಂದ ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸೇವೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಫ್ರೀಡಂ ಪಾರ್ಕ್‍ನಲ್ಲಿ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಕುಟುಂಬದ ಜೊತೆ ಉಪವಾಸ ಸತ್ಯಾಗ್ರಹ ನಡೆಸಲಿದೆ. ಅದೇ ಫ್ರೀಡಂಪಾರ್ಕ್‍ನಲ್ಲಿ ಪೌರತ್ವ ಕಾಯಿದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಪ್ರತಿಭಟನೆ ನಡೆಯಲಿದೆ.

ಎಂಐಎಂನ ಸಂಸದ ಅಸಾದುದ್ದೀನ್ ಓವೈಸಿ ಭಾಗಿಯಾಗಲಿದ್ದಾರೆ. ಪ್ರತಿಭಟನೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಲಿದ್ದಾರೆ. ಓವೈಸಿಗೆ ಈಗಾಗಲೇ ಉಪ್ಪಾರಪೇಟೆ ಪೊಲೀಸರು ಷರತ್ತು ಬದ್ಧ ಅನುಮತಿ ಕೊಟ್ಟಿದ್ದಾರೆ. ಎರಡು ಪ್ರತಿಭಟನೆಯಿಂದಾಗಿ ಫ್ರೀಡಂ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಲಿದೆ.

Comments

Leave a Reply

Your email address will not be published. Required fields are marked *