ಲಿಂಗತ್ವ ಸಾಬೀತುಪಡಿಸಿ ಎಂದು ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿದ ಪೊಲೀಸರು – ದೂರು ದಾಖಲು

ಅಗರ್ತಲಾ: ಪೊಲೀಸರು ನಮ್ಮನ್ನು ಬಂಧಿಸಿ, ಲಿಂಗತ್ವ ಸಾಬೀತುಪಡಿಸಿಕೊಳ್ಳಲು ವಿವಸ್ತ್ರಗೊಳಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ತೃತೀಯ ಲಿಂಗಿಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ತ್ರಿಪುರದಲ್ಲಿ ನಡೆದಿದೆ.

ನಮ್ಮ ಸಮುದಾಯದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ನಮ್ಮ ಲಿಂಗತ್ವವನ್ನು ಸಾಬೀತುಪಡಿಸಲು ವಿವಸ್ತ್ರಗೊಳಿಸಿ ವಿಕೃತಿ ಮೆರೆದಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತರೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯೋಗಿ, ಬಿಜೆಪಿಗೆ ಬಿಗ್‌ ಶಾಕ್‌ – ಸಚಿವ ಸೇರಿ 4 ಶಾಸಕರು ರಾಜೀನಾಮೆ, ಇಂದು ಎಸ್‌ಪಿ ಸೇರ್ಪಡೆ

ಶನಿವಾರ ರಾತ್ರಿ ಹೋಟೆಲ್‌ವೊಂದರಲ್ಲಿ ಪಾರ್ಟಿ ಮುಗಿಸಿಕೊಂಡು ನಾಲ್ವರು ತೃತೀಯಲಿಂಗಿಗಳು ಹೊರಬಂದಾಗ ಈ ಘಟನೆ ನಡೆದಿದೆ. ಘಟನೆ ಸಂಬಂಧ ಸೋಮವಾರ ಸಂತ್ರಸ್ತರು ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲೇನಿದೆ..?
ನಮ್ಮ ಮೇಲೆ (ನಾಲ್ವರು) ಸುಲಿಗೆ ಆರೋಪ ಹೊರಿಸಿ ಪಶ್ಚಿಮ ಅಗರ್ತಲಾ ಮಹಿಳಾ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಇದ್ದ ಪುರುಷ ಮತ್ತು ಮಹಿಳಾ ಪೊಲೀಸ್‌ ಅಧಿಕಾರಿಗಳು ನಮ್ಮನ್ನು ವಿವಸ್ತ್ರಗೊಳಿಸಿದರು. ನಿಮ್ಮ ಲಿಂಗತ್ವವನ್ನು ಸಾಬೀತುಪಡಿಸಿ ಎಂದು ಪೊಲೀಸರು ನಮ್ಮ ಬಟ್ಟೆಗಳನ್ನು ಬಿಚ್ಚಿಸಿದ್ದಾರೆ. ನಮ್ಮ ವಿಗ್‌ ಮತ್ತು ಒಳ ಉಡುಪುಗಳನ್ನು ಪೊಲೀಸ್‌ ಠಾಣೆಯಲ್ಲೇ ಇರಿಸಿಕೊಂಡಿದ್ದಾರೆ. ನಮಗೆ ನ್ಯಾಯ ಬೇಕು. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

ಯಾವುದೇ ಪುರಾವೆಗಳಿಲ್ಲದೇ ನಮ್ಮ ವಿರುದ್ಧ ಸುಲಿಗೆ ಆರೋಪ ಹೊರಿಸಲಾಗಿದೆ. ಪೊಲೀಸರು ನಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಸಂತ್ರಸ್ತ ತೃತೀಯ ಲಿಂಗಿ ದೂರಿನಲ್ಲಿ ತಿಳಿಸಿದ್ದಾರೆ.

ತೃತೀಯಲಿಂಗಿ ಸಮುದಾಯದ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಲಾಗಿದೆ. ಸುಪ್ರೀಂ ಕೋರ್ಟ್‌ನ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ತೀರ್ಪಿನಲ್ಲಿ, ಸೆಕ್ಷನ್‌ 377 ನಿಂದ ಈ ಹಕ್ಕನ್ನು ಒದಗಿಸಲಾಗಿದೆ ಎಂದು ತೃತೀಯಲಿಂಗಿಗಳು ಪ್ರತಿಪಾದಿಸಿದ್ದಾರೆ.

ಘಟನೆ ಸಂಬಂಧ ವರದಿ ಕೇಳಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತ್ರಿಪುರ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನ ಕ್ರ್ಯಾಶ್ ಆಗಿ ರೈಲು ಹಳಿಗಳ ಮೇಲೆ ಬಿದ್ದಿದ್ದ ಪೈಲಟ್ ಬದುಕುಳಿದಿದ್ದೇ ರೋಚಕ

ಐಪಿಸಿ ಸೆಕ್ಷನ್‌ 151ರಡಿ (ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿಗೆ ಭಂಗವುಂಟುಮಾಡುವುದು) ಈ ನಾಲ್ವರನ್ನು ಬಂಧಿಸಲಾಗುತ್ತು ಎಂದು ನಮ್ಮ ಕಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ಕಾರಣದಿಂದಾಗಿ ಅವರನ್ನು ಬಂಧಿಸಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿಲ್ಲ. ಪ್ರಕರಣ ಕುರಿತು ಗಮನ ಹರಿಸಲಾಗಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *