ಬೆಂಗಳೂರು: ಕುಡಿದ ಮತ್ತಿನಲ್ಲಿ ಮಂಗಳಮುಖಿ ರಂಪಾಟ ನಡೆಸಿ ಪೊಲೀಸರ ಮುಂದೆಯೇ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ರಾಜಧಾನಿಯಲ್ಲಿ ತುಂಬಾ ಗ್ರ್ಯಾಂಡ್ ಆಗಿ ಹೊಸ ವರ್ಷವನ್ನು ಆಚರಿಸಿಕೊಂಡರು. ನಗರದ ಬಹುತೇಕ ಜನರು ಎಂಜಿ ರೋಡ್, ಚರ್ಚ್ ಸ್ಟ್ರೀಟ್‍ಗೆ ಬಂದು ಹೊಸ ವರ್ಷವನ್ನು ಆಚರಿಸಿ ಮಸ್ತ್ ಎಂಜಾಯ್ ಮಾಡಿದರು. ಸೆಲಬ್ರೇಷನ್ ಮುಗಿಸಿಕೊಂಡು ಮನೆಗೆ ಹೊರಡುವಾಗ, ಎಂಜಿ ರೋಡಲ್ಲಿ ಕುಡಿದ ಮತ್ತಲ್ಲಿ ಮಂಗಳಮುಖಿ ರಂಪಾಟ ಮಾಡಿದ್ದಾಳೆ. ಇದನ್ನೂ ಓದಿ: ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

ಕುಡಿದ ಮತ್ತಿನಲ್ಲಿ ಮಂಗಳಮುಖಿ ಕಂಡ ಕಂಡವರ ಕೆನ್ನೆಗೆ ಬಾರಿಸಿ ಪುಂಡಾಟ ಮೆರೆದಿದ್ದಾಳೆ. ರಸ್ತೆಯಲ್ಲಿ ಬರುವವರನ್ನೆಲ್ಲಾ ತಬ್ಬಿಕೊಳ್ಳಲು ಮುಂದಾಗಿದ್ದು, ಪೊಲೀಸರಿಗೂ ಅವಾಜ್ ಹಾಕಿದ್ದಾಳೆ. ಅಷ್ಟೇ ಅಲ್ಲದೆ ಬಟ್ಟೆ ತೆಗೆದು ಅಸಭ್ಯವಾಗಿ ವರ್ತಿಸಿದ್ದಾಳೆ. ಇದನ್ನೂ ಓದಿ: ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ
ಮಂಗಳಮುಖಿ ವರ್ತನೆ ನೋಡಿ ಪೊಲೀಸರು ಇಲ್ಲಿಂದ ಹೋಗಿ ಎಂದು ಎಷ್ಟೇ ಮನವೊಲಿಸಿದರು ಮೊಂಡುತನ ಪ್ರದರ್ಶಿಸಿದ್ದಾಳೆ. ಕೊನೆಗೂ ಮಹಿಳಾ ಪೊಲೀಸರು ಮಂಗಳಮುಖಿಯನ್ನು ಕಳುಹಿಸಿದರು.

Leave a Reply