ಸಿನಿಮಾದಲ್ಲಿ ನಿಮ್ಮನೆ ನಾಯಿ ಕಾಣಿಸಿಕೊಳ್ಳಬೇಕೆ?- ಹಾಗಿದ್ರೆ ಇಲ್ಲಿದೆ ಸದಾವಕಾಶ

ಬೆಂಗಳೂರು: ಬಹುತೇಕರು ಮನೆಗಳಲ್ಲಿ ಮುದ್ದು ಮುದ್ದಾದ ನಾಯಿಗಳನ್ನು ಸಾಕಿಕೊಂಡಿರುತ್ತಾರೆ. ಅಂತಹ ಮುದ್ದು ನಾಯಿಗಳಿಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶವೊಂದು ಬಂದಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸುವ #777ಚಾರ್ಲಿ ಸಿನಿಮಾದಲ್ಲಿ ನಿಮ್ಮ ನೆಚ್ಚಿನ ಕ್ಯೂಟ್ ಡಾಗಿ ಕಾಣಿಸಿಕೊಳ್ಳಬಹುದು.

ಈ ಕುರಿತು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು, ತಮ್ಮ ಚಿತ್ರತಂಡ ತರಬೇತಿ ಪಡೆದ ನಾಯಿಯ ಹುಡುಕಾಟದಲ್ಲಿದೆ. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ತರಬೇತಿ ಕೇಂದ್ರಗಳಲ್ಲಿರುವ ಟ್ರೈನ್ಟ್ ನಾಯಿಗಳ ಭಾವಚಿತ್ರ ಮತ್ತು ವಿಡಿಯೋವನ್ನು ವಾಟ್ಸಪ್ ಅಥವಾ ಇ-ಮೇಲ್ ಮೂಲಕ ಕಳಿಸುವಂತೆ ತಿಳಿಸಿದ್ದಾರೆ. ಫೆಬ್ರವರಿ 20ರೊಳಗೆ ನೀವು ನಿಮ್ಮ ಮುದ್ದು ನಾಯಿಯ ಫೋಟೋ ಹಾಗೂ ವಿಡಿಯೋವನ್ನು ಕೆಳಕಾಣಿಸಿದ ನಂಬರ್ ಗೆ ಸೆಂಡ್ ಮಾಡಬೇಕು.

ಎಲ್ಲ ತಳಿಯ ನಾಯಿಗಳಿಗು ಕೂಡ ಅವಕಾಶಗಳಿವೆ. ಅದರಲ್ಲಿ ಕೆಲ ವಿಶೇಷ ತಳಿಯ ಶ್ವಾನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು 777 ಚಾರ್ಲಿ ಚಿತ್ರತಂಡ ತಿಳಿಸಿದೆ.

ವಿಶೇಷ ತಳಿಯ ನಾಯಿಗಳ ಪಟ್ಟಿ: ಅಫ್ಘಾನ್ ಹೌಂಡ್ಸ್, ಅಮೆರಿಕನ್ ಅಕಿತಾ, ಬೀಗ್ಲೆಸ್, ಬ್ಲಫ್ ಮಸ್ತಿಫ್, ಬಾರ್ಡರ್ ಕೂಲಿ, ಬಾಕ್ಸರ್, ಬುಲ್ ಡಾಗ್, ಕೇನ್ ಕೊರ್ಸೋ, ಚಿಪ್ಪಿಪರೈ, ಕಾಕಪ್ ಸ್ಪಾನಿಯಲ್, ಜರ್ಮನ್ ಶಫರ್ಡ್, ಗ್ರೀಟ್ ಡೇನ್, ಗ್ರೇಹೌಂಡ್/ಮುಧೋಳ, ಐರಿಶ್ ಶೆಟರ್, ನ್ಯೂಫೌಂಡ್ ಲ್ಯಾಂಡ್, ಪಶ್ಮಿ, ಪೂಡ್ಲೆ, ರಾಜಪಲಾಯಂ, ರಾಂಪುರ ಹೌಂಡ್ಸ್, ರೊಟ್‍ವೈಲರ್, ಸಮೋಯ್ಡ್, ಸೈಬಿರಿಯನ್ ಹಸ್ಕಿ, ಬೆಮರ್ಡ್ ಮತ್ತು ವಿಫೆಟ್. ಈ ತಳಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ವಾಟ್ಸಪ್: 9380701197/9035340292
ಮೊಬೈಲ್: 9380701197/7760067753
ಇ-ಮೇಲ್: contact@777charlie.com

Comments

Leave a Reply

Your email address will not be published. Required fields are marked *