ಮೈಸೂರಿನಿಂದ ಹೊರಟಿದ್ದ ರೈಲು ಅಪಘಾತ; ದಕ್ಷಿಣ ರೈಲ್ವೆಯಿಂದ ಸಹಾಯವಾಣಿ ನಂಬರ್ ಬಿಡುಗಡೆ

– ಮೈಸೂರಿನಿಂದ 180 ಮಂದಿ ಪ್ರಯಾಣ
– ಬೆಂಗಳೂರು ನಿಲ್ದಾಣದಿಂದ 600 ಜನ ಬೋರ್ಡಿಂಗ್ ಆಗಿರೋ ಮಾಹಿತಿ

ಚೆನ್ನೈ: ಮೈಸೂರುನಿಂದ ದರ್ಭಾಂಗ್‌ಗೆ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಚೆನ್ನೈ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಬೋಗಿಗಳು ಹೊತ್ತು ಉರಿದಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಸಹಾಯವಾಣಿ ನಂಬರ್ ಪ್ರಕಟಿಸಿದೆ.

ಚೆನ್ನೈ ವಿಭಾಗ: 04425354151, 0442435499
ಬೆಂಗಳೂರು ವಿಭಾಗ: 8861309815
ಮೈಸೂರು ವಿಭಾಗ: 9731143981

ಅಪಘಾತದಲ್ಲಿ 10 ಮಂದಿಗೆ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಅಪಾಯಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈಲಿನ ಕಿಟಕಿಗಳ ಮೂಲಕ ಕೆಲ ಪ್ರಯಾಣಿಕರು ಹೊರಬಂದಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲಿನಲ್ಲಿ 900 ಪ್ರಯಾಣಿಕರು ಇರುವುದಾಗಿ ಅಂದಾಜಿಸಲಾಗಿದ್ದು, ಮೈಸೂರಿನ 180 ಜನ ಪ್ರಯಾಣಿಕರಿದ್ದರು ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ನಾಲ್ಕು ಎಸಿ ಕೋಚ್‌ಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ರೈಲ್ವೆ ದುರಂತ ಪ್ರಕರಣ ಬೋರ್ಡಿಂಗ್ ಆದ ಪ್ರಯಾಣಿಕರ ಮಾಹಿತಿ

ಬೆಂಗಳೂರು – 600 ಜನ ಬೋರ್ಡಿಂಗ್

ಕೆಂಗೇರಿ – 200 ಜನ ಬೋರ್ಡಿಂಗ್

ಮಂಡ್ಯ – 30 ಜನ ಬೋರ್ಡಿಂಗ್ ಇದನ್ನೂ ಓದಿ: ಮೈಸೂರಿನಿಂದ ದರ್ಭಾಂಗ್‌ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್, ಗೂಡ್ಸ್ ರೈಲಿಗೆ ಡಿಕ್ಕಿ – ಹೊತ್ತಿ ಉರಿದ ಬೋಗಿಗಳು