ಮದುವೆ ಮುಗಿಸಿ ಹೊರಟಿದ್ದ ಟ್ರಾಕ್ಟರ್ ಪಲ್ಟಿ – ಇಬ್ಬರು ಸಾವು, 15 ಜನರಿಗೆ ಗಾಯ

ಗದಗ: ಮದುವೆ ಮುಗಿಸಿ ಹೊರಟಿದ್ದ ಟ್ರಾಕ್ಟರ್‌ವೊಂದು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, 15 ಕ್ಕೂ ಹೆಚ್ಚು ಜನರು ಆಸ್ಪತ್ರೆ ಸೇರಿದ ಘಟನೆ ಜಿಲ್ಲೆ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಬಳಿ ನಡೆದಿದೆ.

15 ವರ್ಷದ ಬಾಲಕ ಪ್ರದೀಪ್ ಕರಿಬಸಣ್ಣವರ್, ಹಾಗೂ 19 ವರ್ಷದ ಯುವಕ ವಿನಾಯಕ ಸಬನೇಶಿ ಮೃತ ದುರ್ದೈವಿಗಳು. ಹಂಗನಕಟ್ಟಿ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣಕ್ಕೆ ಹೊರಟಿದ್ದರು. ಈ ವೇಳೆ ಹಂಗನಕಟ್ಟಿ ಕ್ರಾಸ್‍ನ ತಿರುವಿನ ವೇಳೆ ಟ್ರಾಲಿ ಹುಕ್ಕಾ ಕಟ್ ಆಗಿ ಪಲ್ಟಿಯಾಗಿದೆ. ಈ ವೇಳೆ ಗಾಯಾಳುಗಳನ್ನು ಶಿರಹಟ್ಟಿ ತಾಲೂಕ ಆಸ್ಪತ್ರೆ ಹಾಗೂ ಗಂಭೀರ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದನ್ನೂ ಓದಿ: ಈಶ್ವರಪ್ಪ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಲಿದ್ದಾರೆ: ಬೊಮ್ಮಾಯಿ

ಇನ್ನೇನು ಮದುವೆ ಸಂಭ್ರಮ ಮುಗಿಸಿ ಊರು ಸೇರಬೇಕಾದವರು ಮಸನ ಹಾಗೂ ಆಸ್ಪತ್ರೆ ಸೇರಿದ್ದು ವಿಪರ್ಯಾಸ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ ನನ್ನ ತಪ್ಪು ಇದ್ದರೆ ಭಗವಂತ ನನಗೆ ಶಿಕ್ಷೆ ಕೊಡಲಿ: ಈಶ್ವರಪ್ಪ

Comments

Leave a Reply

Your email address will not be published. Required fields are marked *