ಮುಗ್ಧತೆಗೆ ಇನ್ನೊಂದು ಹೆಸರೇ ಮಕ್ಕಳು – ಈ ವೀಡಿಯೋ ನೋಡಿ!

ನವದೆಹಲಿ: ಮಕ್ಕಳು ಏನು ಮಾಡಿದರೂ ಚೆಂದ. ಮಗುವಿಗೆ ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸ ತಿಳಿದಿಲ್ಲ. ಅವರಲ್ಲಿ ಯಾವುದೇ ಸಾಮಾಜಿಕ ಸ್ಥಾನಮಾನದ ಬಗ್ಗೆ ಚಿಂತೆಯೂ ಇರುವುದಿಲ್ಲ. ಅದೇ ರೀತಿ ಇಲ್ಲೊಂದು ಮಗು ತನ್ನ ವರ್ಗ ಜಾತಿ ಬೇರೆಯಾದರೂ ಇನ್ನೊಂದು ಮಗುವನ್ನು ಅಪ್ಪಿಕೊಂಡು ಆಟವಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಕ್ಕಳು ಮನಸ್ಸು ಪರಿಶುದ್ಧ. ಮುಗ್ಧತೆಯಿಂದ ಯಾರನ್ನು ಬೇಕಾದರೂ ಬದಲಾಯಿಸುವ ಗುಣ ಮಕ್ಕಳಿಗಿದೆ. ಇನ್‍ಸ್ಟಾದಲ್ಲಿ ಹಾಕಿರುವ ವೀಡಿಯೋದಲ್ಲಿ, ಕಿಯಾನ್ಯ್ ದೇಟೆ ಎಂದು ಗುರುತಿಸಲಾದ ಚಿಕ್ಕ ಮಗು, ರಸ್ತೆಯಲ್ಲಿ ಆಟಿಕೆ ಮಾರಾಟಗಾರರ ಮಗನ ಜೊತೆ ಉತ್ಸಾಹದಿಂದ ಡ್ಯಾನ್ಸ್ ಮಾಡುತ್ತಿರುತ್ತಾನೆ. ಅದರಂತೆ ಆಟಿಕೆ ಮಾರಾಟಗಾರರ ಮಗು ಸಹ ಈ ಮಗುವಿನ ಕಂಪೆನಿಯನ್ನು ಆನಂದಿಸುತ್ತ, ಅಪ್ಪುಗೆಯನ್ನು ನೀಡುತ್ತದೆ. ಈ ಸೂಪರ್ ವೀಡಿಯೋವನ್ನು ಕಿಯಾನ್ಯ್ ತಾಯಿ ಸೆರೆಹಿಡಿದಿದ್ದು, ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದುಗೆ ಮುಳ್ಳುವಾಯ್ತು ಅಹಿಂದ ಮಂತ್ರ – ಕುರುಬ ಸಮಾಜದಲ್ಲಿ ಅಸಮಾಧಾನ ಸ್ಫೋಟ

ಇಬ್ಬರು ಮಕ್ಕಳು ತಮ್ಮ ಸಾಮಾಜಿಕ ಸ್ಥಾನಮಾನದ ಹೊರತಾಗಿಯೂ ಪರಸ್ಪರ ಆಟವಾಡುವ, ಅಪ್ಪಿಕೊಳ್ಳುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ವೀಕ್ಷಕರು ಇಷ್ಟಪಟ್ಟಿದ್ದು, ಮಕ್ಕಳ ಹೃದಯ ಮತ್ತು ಮುಗ್ಧತೆಯನ್ನು ಮೆಚ್ಚಿಕೊಂಡರು. ಇನ್ನೂ ಅನೇಕರು ಮಗುವನ್ನು ಬೆಳೆಸುತ್ತಿರುವ ರೀತಿಯನ್ನು ಇಷ್ಟಪಟ್ಟರು. ವೀಡಿಯೋ ನೋಡಿದವರು ಹಾರ್ಟ್ ಮತ್ತು ಲವ್ ಎಮೋಜಿಗಳೊಂದಿಗೆ ಕಮೆಂಟ್ ತುಂಬಿಸಿದ್ದಾರೆ.

Comments

Leave a Reply

Your email address will not be published. Required fields are marked *