ಡೆತ್‍ನೋಟ್ ಬರೆದಿಟ್ಟು ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆ

ಹಾಸನ: ಡೆತ್‍ನೋಟ್ ಬರೆದಿಟ್ಟು ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.  ಇದನ್ನೂ ಓದಿ: ಜೀವನ್‍ಭೀಮಾ ನಗರ ರೇಪ್‍ಕೇಸ್‍ಗೆ ಟ್ವಿಸ್ಟ್ – ಕ್ಯಾಬ್‍ನಲ್ಲಿ ರೇಪ್ ಮಾಡಿರೋದು ಬೆಳಕಿಗೆ

ಸಿ.ಟಿ.ಗೋಪಾಲಕೃಷ್ಣ(41) ನೇಣಿಗೆ ಶರಣಾದ ಅಧಿಕಾರಿ. ಗೋಪಾಲಕೃಷ್ಣ ಅವರು ಕಳೆದ ಎರಡು ವರ್ಷಗಳಿಂದ ಸಕಲೇಶಪುರ ಪುರಸಭೆ ಕಂದಾಯ ಅಧಿಕಾರಿಯಾಗಿದ್ದರು. ನನಗೆ ಬದುಕಲು ಇಷ್ಟವಿಲ್ಲ, ಆದ್ದರಿಂದ ಸಾಯುತ್ತಿದ್ದೇನೆ ಎಂದು ಡೆತ್‍ನೋಟ್ ಬರೆದಿಟ್ಟು ಗೋಪಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಲಕೃಷ್ಣ ಅವರು ಹಾಸನ ನಗರದ ಹೊರವಲಯದ ಚಿಕ್ಕಕೊಂಡಗೊಳ ನಿವಾಸಿಯಾಗಿದ್ದು, ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ 

ಗೋಪಾಲಕೃಷ್ಣ ಆತ್ಮಹತ್ಯೆ ಸಂಬಂಧ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಕೆಲದಿನಗಳ ಹಿಂದೆ ಅನಾರೋಗ್ಯ ಕಾರಣದಿಂದ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ, ಗ್ರಾಮಲೆಕ್ಕಿಗರೊಬ್ಬರು ನೇಣಿಗೆ ಶರಣಾಗಿದ್ದರು. ಇದನ್ನೂ ಓದಿ: ಪತಿಯಿಂದಲೇ ಪತ್ನಿಯ ಕತ್ತು ಸೀಳಿ ಭೀಕರ ಹತ್ಯೆ  – ಇದನ್ನೂ ಓದಿ: ಭಿಕ್ಷೆ ಬೇಡುವಾಗ ತಿಂಡಿ ಆಸೆ ತೋರಿಸಿ 14ರ ಬಾಲಕಿ ಮೇಲೆ ಅತ್ಯಾಚಾರ

 

Comments

Leave a Reply

Your email address will not be published. Required fields are marked *