ಟೋಯಿಂಗ್ ವಾಹನ ಸಿಬ್ಬಂದಿ ಅಮಾನುಷವಾಗಿ ವರ್ತಿಸಿಲ್ಲ, ಅದೆಲ್ಲಾ ಸುಳ್ಳು: ಆರಗ ಜ್ಞಾನೇಂದ್ರ

ಶಿವಮೊಗ್ಗ: ಬೆಂಗಳೂರಿನಲ್ಲಿ ಬೈಕ್ ಸವಾರನ ಜೊತೆ ಟೋಯಿಂಗ್ ವಾಹನ ಸಿಬ್ಬಂದಿ ಯಾವುದೇ ರೀತಿ ಅಮಾನುಷವಾಗಿ ವರ್ತಿಸಿಲ್ಲ. ಅಂತಹ ಯಾವುದೇ ಘಟನೆ ನಡೆದಿಲ್ಲ. ಅದೆಲ್ಲಾ ಸುಳ್ಳು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.

ಜಿಲ್ಲೆಯ ಹೊಸನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಯಾರೋ ಒಬ್ಬ ಅರ್ಧ ವೀಡಿಯೋ ಮಾಡಿ ಹಾಕಿದ್ದಾನೆ. ಘಟನೆಯ ಬಗ್ಗೆ ಸ್ವತಃ ಬೈಕ್ ಸವಾರನೇ ಹೇಳಿಕೆ ಕೊಟ್ಟಿದ್ದಾನೆ. ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ವಶಕ್ಕೆ ಪಡೆಯುವ ಮೊದಲು ಟೋಯಿಂಗ್ ವಾಹನ ಸಿಬ್ಬಂದಿ ಸೈರನ್ ಹಾಕಿದ್ದಾರೆ. ಗಾಡಿ ವಶಕ್ಕೆ ಪಡೆಯುವ ಮೊದಲು ಪ್ರತಿಯೊಂದು ನಿಯಮವನ್ನು ಅನುಸರಿಸಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

ಟೋಯಿಂಗ್ ಸಿಬ್ಬಂದಿ ವಶಪಡಿಸಿಕೊಂಡಿದ್ದ ಬೈಕ್, ಹೋಟೆಲ್‍ನ ಫುಡ್ ಸಪ್ಲೇ ಮಾಡುವವನದ್ದು. ಈ ವಿಷಯ ತಿಳಿದ ನಂತರ ದಂಡ ವಿಧಿಸದೇ ಗಾಡಿಯನ್ನು ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ. ಆದರೆ ಕೆಲವರು ಅರ್ಧಂಬರ್ಧ ವೀಡಿಯೋ ಮಾಡಿ ಸಾರ್ವಜನಿಕರಿಗೆ ತಪ್ಪು ಕಲ್ಪನೆ ಬರುವ ರೀತಿ ಮಾಡಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *