ವೀಕೆಂಡ್‌ ಮೋಜು-ಮಸ್ತಿ; ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು

ಚಿಕ್ಕಬಳ್ಳಾಪುರ: ವೀಕೆಂಡ್‌ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ (Nandhi Hills) ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಕಾರಣ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದ ಪರದಾಡುವಂತಾಯಿತು.

ನಂದಿಬೆಟ್ಟ ನೋಡಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ. ನಂದಿಬೆಟ್ಟದ ಚೆಕ್‌ಪೋಸ್ಟ್‌ನಿಂದಲೇ ವಾಹನಗಳು ತುಂಬಿ‌ತುಳುಕಿದ ದೃಶ್ಯ ಕಂಡುಬಂತು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೈಕ್‌ಗೆ ಕಾರು ಡಿಕ್ಕಿ – ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಮುಂಜಾನೆ 5 ಗಂಟೆಯಿಂದ ನಂದಿಬೆಟ್ಟದ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ನಂದಿಗಿರಿಧಾಮ ಪೊಲೀಸರು ವಾಹನ ಸಂಚಾರ ದಟ್ಟಣೆ ನಿಭಾಯಿಸಲು ಹೈರಾಣಾದರು. ರಸ್ತೆಯ ಎರಡು ಬದಿ ವಿರುದ್ಧ ದಿಕ್ಕಿನಲ್ಲೂ ವಾಹನಗಳು ನಿಂತಿದ್ದು ನಂದಿಬೆಟ್ಟದಿಂದ‌ ವಾಪಾಸ್ ಬರುವವರು ಕೆಳಗೆ ಬರದಂತಾಯಿತು. ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಅತ್ತ ಮೇಲೂ ಹೋಗಲಾಗದೆ ಇತ್ತ ಕೆಳಗೆ ವಾಪಸ್ ಸಹ ಬರಲಾಗದೆ ಪರದಾಡಿದರು.

ಬಾನಂಗಳ ತಬ್ಬಿದ ಮಂಜಿನ ಮೋಡಗಳಿಂದ ತುಂಬಿದ್ದ ವಾತಾವರಣದಲ್ಲಿ ಪ್ರವಾಸಿಗರು ಕುಣಿದು ಕುಪ್ಪಳಿಸಿದರು. ಕರಾವಳಿ ಕಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಇದನ್ನೂ ಓದಿ: ಕೃಷಿ ಹೊಂಡಕ್ಕೆ ಬಿದ್ದು ಮಾಜಿ ಪ್ರಿಯಕರನೊಂದಿಗೆ ವಿವಾಹಿತ ಯುವತಿ ಆತ್ಮಹತ್ಯೆ