ಆದಿಚುಂಚನಗಿರಿ ಮಠಕ್ಕೆ ಹೊರಟಿದ್ದ ಪ್ರವಾಸಿಗರ ಕಾರಲ್ಲಿ ದಿಢೀರ್ ಬೆಂಕಿ

ಮಂಡ್ಯ: ಆದಿಚುಂಚನಗಿರಿ (Adichunchanagiri) ಮಠಕ್ಕೆ ಹೊರಟಿದ್ದ ಪ್ರವಾಸಿಗರ ಕಾರು (Car) ಹೊತ್ತಿ ಉರಿದ ಘಟನೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಬಳಿ ನಡೆದಿದೆ.

ಬೆಂಗಳೂರಿನ (Bengaluru) ಕುಟುಂಬವೊಂದು ಆದಿಚುಂಚನಗಿರಿಗೆ ಕಾರಿನಲ್ಲಿ ಹೊರಟಿತ್ತು. ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು. ಕಾರು ಆದಿಚುಂಚನಗಿರಿ ಸಮೀಪ ಬಂದಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಐಶ್ವರ್ಯ ಗೌಡ ವಂಚನೆ ಕೇಸ್ – ವಿನಯ್ ಕುಲಕರ್ಣಿಗೆ ಇಡಿ ಸಮನ್ಸ್

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಮಹಿಳೆ, ಹಾಗೂ ಆಕೆಯ ಪತಿ ಮಗುವನ್ನು ಕರೆದುಕೊಂಡು ಕಾರಿನಿಂದ ಇಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ.

ಶಾರ್ಟ್‍ಸಕ್ರ್ಯೂಟ್‍ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಕಾರು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ನಾಳೆಯೇ ಯುದ್ಧಕ್ಕೆ ಒಪ್ಪಿಗೆ ಪಡೀತಾರಾ ಮೋದಿ? – ನಾಳೆ ಪ್ರಧಾನಿ ನೇತೃತ್ವದಲ್ಲಿ ಕ್ಯಾಬಿನೆಟ್ ಮೀಟಿಂಗ್